ADVERTISEMENT

ಏರ್‌ ಇಂಡಿಯಾ, ವಿಸ್ತಾರಾ ವಿಲೀನಕ್ಕೆ ಮಾತುಕತೆ

ಪಿಟಿಐ
Published 13 ಅಕ್ಟೋಬರ್ 2022, 16:03 IST
Last Updated 13 ಅಕ್ಟೋಬರ್ 2022, 16:03 IST
   

ನವದೆಹಲಿ (ಪಿಟಿಐ): ವಿಸ್ತಾರಾ ವಿಮಾನಯಾನ ಕಂಪನಿಯನ್ನು ಏರ್ ಇಂಡಿಯಾ ಜೊತೆ ವಿಲೀನಗೊಳಿಸುವ ಕುರಿತು ಟಾಟಾ ಸಮೂಹದ ಜೊತೆ ಗೋಪ್ಯ ಮಾತುಕತೆ ನಡೆಯುತ್ತಿದೆ ಎಂದು ಸಿಂಗ‍ಪುರ ಏರ್‌ಲೈನ್ಸ್ (ಎಸ್‌ಐಎ) ಕಂಪನಿಯು ಗುರುವಾರ ತಿಳಿಸಿದೆ.

ವಿಸ್ತಾರಾ ಕಂಪನಿಯಲ್ಲಿ ಎಸ್‌ಐಎ ಶೇಕಡ 49ರಷ್ಟು ಪಾಲು ಹೊಂದಿದೆ. ಎರಡು ಕಂಪನಿಗಳ ವಿಲೀನದ ವಿಚಾರವಾಗಿ ತಾನು ಟಾಟಾ ಸಮೂಹದ ಜೊತೆ ಮಾತುಕತೆ ನಡೆಸುತ್ತಿರುವುದು ನಿಜ ಎಂಬುದನ್ನು ಎಸ್‌ಐಎ ತಿಳಿಸಿರುವುದು ಇದೇ ಮೊದಲು.

ವಿಸ್ತಾರಾದಲ್ಲಿ ಟಾಟಾ ಸಮೂಹವು ಶೇ 51ರಷ್ಟು ಪಾಲು ಹೊಂದಿದೆ, ಏರ್‌ ಇಂಡಿಯಾದ ಪೂರ್ಣ ಮಾಲೀಕತ್ವವನ್ನು ಹೊಂದಿದೆ. ಅಲ್ಲದೆ, ಏರ್‌ಏಷ್ಯಾ ಇಂಡಿಯಾ ಕಂಪನಿಯಲ್ಲಿ ಶೇ 83.67ರಷ್ಟು ಪಾಲು ಹೊಂದಿದೆ.

ADVERTISEMENT

ಎಸ್‌ಐಎ ಕಂಪನಿಯು ಸಿಂಗಪುರ ಷೇರುಪೇಟೆಗೆ ನೀಡಿರುವ ಮಾಹಿತಿ ಪ್ರಕಾರ, ಮಾತುಕತೆಗಳು ಇನ್ನೂ ಪೂರ್ಣಗೊಂಡಿಲ್ಲ. ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.