ADVERTISEMENT

ಕೆಐಒಸಿಎಲ್‌ ನೂತನ ಸಿಎಂಡಿಯಾಗಿ ಎಸ್.ಕೆ. ಗೊರೈ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 21:44 IST
Last Updated 1 ಜುಲೈ 2021, 21:44 IST
ಎಸ್‌.ಕೆ. ಗೊರೈ
ಎಸ್‌.ಕೆ. ಗೊರೈ   

ಮಂಗಳೂರು: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ (ಕೆಐಒಸಿಎಲ್‌) ಪ್ರಭಾರ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾಗಿ (ಸಿಎಂಡಿ) ಹಣಕಾಸು ನಿರ್ದೇಶಕ ಸ್ವಪ್ನಕುಮಾರ್‌ ಗೊರೈ ಅವರನ್ನು ನೇಮಿಸಲಾಗಿದೆ. ಹಾಲಿ ಸಿಎಂಡಿ ಎಂ.ವಿ. ಸುಬ್ಬರಾವ್ ಅವರು ಜೂನ್‌ 30ರಂದು ನಿವೃತ್ತರಾಗಿದ್ದು, ಅವರ ಜಾಗಕ್ಕೆ ಈ ನೇಮಕ ಮಾಡಲಾಗಿದೆ.

ಲೆಕ್ಕಪರಿಶೋಧಕರಾಗಿರುವ ಗೊರೈ, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಸುಮಾರು 33 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT