ನವದೆಹಲಿ: ಜಪಾನ್ ಮೂಲದ ಸಾಫ್ಟ್ಬ್ಯಾಂಕ್, ಒನ್97 ಕಮ್ಯುನಿಕೇಷನ್ಸ್ (ಪೇಟಿಎಂ ಮಾತೃಸಂಸ್ಥೆ) ಕಂಪನಿಯಲ್ಲಿ ಹೊಂದಿರುವ ಶೇಕಡ 4.5ರಷ್ಟು ಷೇರುಗಳನ್ನು ₹ 1,627 ಕೋಟಿಗೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಪೇಟಿಎಂ ಆರಂಭಿಕ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಲು ಇದ್ದ ಸಮಯದ ನಿರ್ಬಂಧ ತೆರವಾದ ತಕ್ಷಣವೇ ಸಾಫ್ಟ್ಬ್ಯಾಂಕ್ ಈ ತೀರ್ಮಾನ ಕೈಗೊಂಡಿದೆ. ಸಾಫ್ಟ್ಬ್ಯಾಂಕ್, ಒನ್97 ಕಮ್ಯುನಿಕೇಷನ್ಸ್ನಲ್ಲಿ ಶೇ 17.5ರಷ್ಟು ಷೇರುಗಳನ್ನು ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.