ADVERTISEMENT

ಸೋನಾಲಿಕಾ ಟ್ರ್ಯಾಕ್ಟರ್‌ ದಾಖಲೆ ಮಾರಾಟ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 18:44 IST
Last Updated 4 ಏಪ್ರಿಲ್ 2019, 18:44 IST
ಸೋನಾಲಿಕಾ ಟ್ರ್ಯಾಕ್ಟರ್‌
ಸೋನಾಲಿಕಾ ಟ್ರ್ಯಾಕ್ಟರ್‌   

ಬೆಂಗಳೂರು: ಸೋನಾಲಿಕಾ ಇಂಟರ್‍ನ್ಯಾಷನಲ್ ಟ್ರ್ಯಾಕ್ಟರ್ಸ್ ಲಿಮಿಟೆಡ್, 2018–19ರ ಹಣಕಾಸು ವರ್ಷದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಿದೆ.

‘ಒಟ್ಟಾರೆ 1,14,057 ಟ್ರ್ಯಾಕ್ಟರ್‍ಗಳನ್ನು ಮಾರಾಟ ಮಾಡಿ ಶೇ 13.8ರಷ್ಟು ಪ್ರಗತಿ ಸಾಧಿಸಲಾಗಿದೆ. ದೇಶೀಯವಾಗಿ 95,976 ಟ್ರ್ಯಾಕ್ಟರ್‌ಗಳನ್ನು ಮಾರಾಟ ಮಾಡಲಾಗಿದೆ. 18,081 ಟ್ರ್ಯಾಕ್ಟರ್‌ಗಳನ್ನು ರಫ್ತು ಮಾಡಲಾಗಿದೆ. 11 ತಿಂಗಳಲ್ಲಿ 1 ಲಕ್ಷ ಟ್ರ್ಯಾಕ್ಟರ್‌ ಮಾರಾಟದ ಮೈಲುಗಲ್ಲು ದಾಟಿದ್ದೇವೆ’ ಎಂದು ಸೋನಾಲಿಕಾ ಗ್ರೂಪ್‍ನ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್‌ ಹೇಳಿದ್ದಾರೆ.

‘ಹೊಸ ‘ಸಿಕಂದರ್’ ಸರಣಿಯ ಟ್ರ್ಯಾಕ್ಟರ್‌ಗಳು, ದೇಶದಾದ್ಯಂತ ರೈತರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ದಕ್ಷಿಣದ ಮಾರುಕಟ್ಟೆಯಲ್ಲಿಯೂ ಮಾರಾಟ ಬಲಪಡಿಸಲಾಗಿದೆ. ದೆಹಲಿ-ಎನ್‍ಸಿಆರ್‍ನಲ್ಲಿ ಹೊಸ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ. ಕೃಷಿಕರ ಹೆಚ್ಚುತ್ತಿರುವ ಅಗತ್ಯಗಳನ್ನು ತ್ವರಿತವಾಗಿ ಪೂರೈಸಲಿದ್ದೇವೆ. ಯೂರೋಪಿನ ಮಾರುಕಟ್ಟೆಗಳಲ್ಲಿ ವಹಿವಾಟು ವಿಸ್ತರಿಸಲಾಗಿದೆ. ಟ್ರ್ಯಾಕ್ಟರ್‍ಗಳಲ್ಲಿ ಸಿಆರ್‍ಡಿಐ ಎಂಜಿನ್‍ ಪರಿಚಯಿಸಿದ ಮೊದಲ ಸಂಸ್ಥೆ ನಮ್ಮದಾಗಿದೆ. ಮಾರುಕಟ್ಟೆ ವಿಸ್ತರಿಸಲು ಹೊಸ ಉತ್ಪನ್ನಗಳಾದ ಸಿಕಂದರ್ ಮತ್ತು ಮೈಲೇಜ್ ಮಾಸ್ಟರ್ ಶ್ರೇಣಿಯ ಟ್ರ್ಯಾಕ್ಟರ್‌ಗಳ ತಯಾರಿಕೆಗೆ ಗಮನ ಕೇಂದ್ರಿಕರಿಸಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.