ADVERTISEMENT

ಸೋನಿ–ಜೀ ವಿಲೀನ ರದ್ದು

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 16:18 IST
Last Updated 22 ಜನವರಿ 2024, 16:18 IST
<div class="paragraphs"><p>ಜೀ ಎಂಟರ್‌ಟೈನ್ಮೆಂಟ್‌ ಎಂಟರ್ಪ್ರೈಸಸ್‌ ಲಿಮಿಟೆಡ್ ಮತ್ತು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ</p></div>

ಜೀ ಎಂಟರ್‌ಟೈನ್ಮೆಂಟ್‌ ಎಂಟರ್ಪ್ರೈಸಸ್‌ ಲಿಮಿಟೆಡ್ ಮತ್ತು ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ

   

ನವದೆಹಲಿ: ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ (ಎಸ್‌ಪಿಎನ್‌ಐ) ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವಿನ ವಿಲೀನ ಒಪ್ಪಂದ ಸೋಮವಾರ ಮುರಿದು ಬಿದ್ದಿದೆ.

ಸೋನಿ ಗ್ರೂಪ್‌ ಕಾರ್ಪೋರೇಷನ್‌ ಭಾರತದಲ್ಲಿರುವ ತನ್ನ ವ್ಯವಹಾರವನ್ನು ಜೀ ಎಂಟರ್‌ಟೈನ್‌ಮೆಂಟ್‌ ಜೊತೆಗೆ ವಿಲೀನಗೊಳಿಸಲು ಮುಂದಾಗಿತ್ತು. 2021ರ ಡಿಸೆಂಬರ್‌ 22ರಂದು ₹83 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಎರಡೂ ಕಂಪನಿಗಳು ಒಪ್ಪಿಗೆ ನೀಡಿದ್ದವು. 2023ರ ಡಿಸೆಂಬರ್‌ 21ರೊಳಗೆ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಈ ಒಪ್ಪಂದವನ್ನು ಸೋನಿ ಕೊನೆಗೊಳಿಸಿದ್ದು, ಈ ಕುರಿತು ಜೀ ಕಂಪನಿಗೆ ಅಧಿಕೃತ ಪತ್ರ ರವಾನಿಸಿದೆ.‌

ADVERTISEMENT

ಹಾಲಿ ಮುಖ್ಯ ಕಾರ್ಯ ನಿರ್ವಾಹಕ ಪುನೀತ್‌ ಗೋಯೆಂಕಾ ಅವರೇ ಹೊಸ ಸಂಸ್ಥೆಗೂ ಸಿಇಒ ಆಗಬೇಕು ಎಂದು ಜೀ ಕಂಪನಿ ಪಟ್ಟು ಹಿಡಿದಿತ್ತು. ಹಣ ದುರ್ಬಳಕೆ ಆರೋಪ ಸಂಬಂಧ ಅವರ ವಿರುದ್ಧ ಸೆಬಿ ತನಿಖೆ ನಡೆಸುತ್ತಿದೆ. ಹಾಗಾಗಿ, ಇದಕ್ಕೆ ಸೋನಿ ಆಕ್ಷೇಪ ವ್ಯಕ್ತಪಡಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.