ನವದೆಹಲಿ: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಕಂಪನಿಯು, ದೇಶದಲ್ಲಿ 20 ಲಕ್ಷ ಸಂಪರ್ಕಗಳನ್ನು ಮಾತ್ರ ನೀಡಲಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್ ಸೋಮವಾರ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸೇರಿದಂತೆ ದೂರಸಂಪರ್ಕ ಸೇವೆ ಒದಗಿಸುವ ಖಾಸಗಿ ಕಂಪನಿಗಳಿಗಿದ್ದ ಆತಂಕ ಇದೀಗ ಕಡಿಮೆಯಾಗಿದೆ.
ಸ್ಟಾರ್‌ಲಿಂಕ್ 20 ಲಕ್ಷ ಗ್ರಾಹಕರನ್ನು ಮಾತ್ರ ಹೊಂದಬಹುದಾಗಿದ್ದು, 200 ಎಂಬಿಪಿಎಸ್‌ವರೆಗಿನ ವೇಗವನ್ನು ನೀಡಲಿದೆ. ಇದು ಇತರೆ ದೂರಸಂಪರ್ಕ ಕಂಪನಿಗಳ ಸೇವೆಗಳ ಮೇಲೆ ಪರಿಣಾಮ ಬೀರದು ಎಂದು ತಿಳಿಸಿದ್ದಾರೆ.
ಈ ಸೇವೆಗಳ ದರ ಅತ್ಯಧಿಕವಾಗಿದ್ದು, ಮಾಸಿಕ ವೆಚ್ಚ ಸುಮಾರು ₹3 ಸಾವಿರ ಇರಬಹುದು. ಬಿಎಸ್‌ಎನ್‌ಎಲ್ 4ಜಿ ಅಳವಡಿಕೆ ಪೂರ್ಣಗೊಂಡಿದೆ. ಈಗ ದರ ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ. ಮಾರುಕಟ್ಟೆ ಪಡೆಯುವುದು ನಮಗೆ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.