ನವದೆಹಲಿ: 2022ರಲ್ಲಿ ದೇಶದ ನವೋದ್ಯಮಗಳು ಸಂಗ್ರಹಿಸಿರುವ ಬಂಡವಾಳವು 2021ಕ್ಕೆ ಹೋಲಿಕೆ ಮಾಡಿದರೆ ಶೇಕಡ 33ರಷ್ಟು ಕಡಿಮೆ ಆಗಿದೆ ಎಂದು ಪಿಡಬ್ಲ್ಯುಸಿ ವರದಿ ಹೇಳಿದೆ. 2022ರಲ್ಲಿ ₹ 1.96 ಲಕ್ಷ ಕೋಟಿ ಬಂಡವಾಳವನ್ನು ನವೋದ್ಯಮಗಳು ಸಂಗ್ರಹಿಸಿದ್ದವು.
ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಇದ್ದರೂ, ಜಾಗತಿಕ ಹೂಡಿಕೆದಾರರು ಭಾರತದ ನವೋದ್ಯಮಗಳ ವಿಚಾರವಾಗಿ ಆಶಾವಾದ ಹೊಂದಿದ್ದಾರೆ ಎಂದು ವರದಿ ಹೇಳಿದೆ. 2021ರಲ್ಲಿ ದೇಶದ ನವೋದ್ಯಮಗಳು ಒಟ್ಟು ₹ 2.87 ಲಕ್ಷ ಕೋಟಿ ಬಂಡವಾಳ ಆಕರ್ಷಿಸಿದ್ದವು.
ಇನ್ನು ಎರಡರಿಂದ ಮೂರು ತ್ರೈಮಾಸಿಕಗಳಲ್ಲಿ ನವೋದ್ಯಮಗಳ ಬಂಡವಾಳ ಸಂಗ್ರಹ ಪ್ರಮಾಣವು ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎಂದು ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯ ಪಾಲುದಾರ ಅಮಿತ್ ನಾವ್ಕಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.