ADVERTISEMENT

ಯುವ ಉದ್ಯಮಶೀಲರ ಕಾರ್ಯಾಗಾರ

ಸಿಂಗಪುರ ಇಂಟರ್‌ನ್ಯಾಷನಲ್‌ ಫೌಂಡೇಷನ್ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:16 IST
Last Updated 7 ಮೇ 2019, 19:16 IST
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನವೋದ್ಯಮಿಗಳು
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನವೋದ್ಯಮಿಗಳು   

ಬೆಂಗಳೂರು: ಸಿಂಗಪುರ ಇಂಟರ್‌ನ್ಯಾಷನಲ್‌ ಫೌಂಡೇಷನ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಯುವ ಸಾಮಾಜಿಕ ಉದ್ಯಮಶೀಲರ ಎರಡು ದಿನಗಳ ಸಾಗರೋತ್ತರ ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 35 ನವೋದ್ಯಮಿಗಳು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಈ ನವೋದ್ಯಮಿಗಳಿಗೆ ಉದ್ಯಮಶೀಲತೆ, ನಾಯಕತ್ವದ ಕೌಶಲ್ಯ, ಮಾರುಕಟ್ಟೆ, ವ್ಯವಹಾರ ಚಾತುರ್ಯ, ಸಾಮಾಜಿಕ ಪರಿಣಾಮ ಮತ್ತು ಉದ್ದಿಮೆ ವಿಸ್ತರಣೆ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ ಮಾರ್ಗದರ್ಶನ ನೀಡಲಾಯಿತು.

ಈ ನವೋದ್ಯಮಿಗಳು 30 ದೇಶಗಳಿಗೆ ಸೇರಿದ ಜಾಗತಿಕ ಯುವ ಸಾಮಾಜಿಕ ಉದ್ಯಮಶೀಲರ ಒಂದು ಸಾವಿರಕ್ಕೂ ಹೆಚ್ಚು ನವೋದ್ಯಮಿಗಳ ಗುಂಪಿಗೆ ಸೇರ್ಪಡೆಯಾಗಲಿದ್ದಾರೆ.

ADVERTISEMENT

ಸಿಂಗಪುರ ಇಂಟರ್‌ನ್ಯಾಷನಲ್‌ ಫೌಂಡೇಷನ್ ಹಮ್ಮಿಕೊಂಡಿರುವ ಯುವ ಸಾಮಾಜಿಕ ಉದ್ಯಮಶೀಲರಿಗೆ ಉತ್ತೇಜನ ನೀಡುವ ಕಾರ್ಯಕ್ರಮವು ಈಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಸಮಾಜದ ಒಳಿತಿಗೆ ಒತ್ತು ನೀಡುವ ವಿನೂತನ ಉದ್ದಿಮೆ ಚಿಂತನೆಯನ್ನು ನವೋದ್ಯಮದ ಮೂಲಕ ಕಾರ್ಯಗತಗೊಳಿಸಲು ಹೊರಟಿರುವ ಬದಲಾವಣೆಯ ಹರಿಕಾರರಿಗೆ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶ.

ಉದ್ದಿಮೆಯ ಪ್ರಮುಖರಿಂದ ಇವರಿಗೆ ಮಾರ್ಗದರ್ಶನ ನೀಡಲಾಗುವುದು. ಚೀನಾದ ಶಾಂಘೈಗೆ ಅಧ್ಯಯನ ಉದ್ದೇಶದ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಸಾಮಾಜಿಕ ಉದ್ಯಮಶೀಲತೆಗೆ ನೆರವಾಗಲು ಪ್ರತಿಯೊಬ್ಬರಿಗೆ ಅಕ್ಟೋಬರ್‌ನಲ್ಲಿ ₹ 10 ಲಕ್ಷದ ನೆರವು ಒದಗಿಸಲಾಗಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.