ADVERTISEMENT

ಸ್ಟಾರ್ಟ್‌ಅಪ್‌: ಮುಂಚೂಣಿಯಲ್ಲಿ ದೆಹಲಿ

ಪಿಟಿಐ
Published 10 ಸೆಪ್ಟೆಂಬರ್ 2019, 14:09 IST
Last Updated 10 ಸೆಪ್ಟೆಂಬರ್ 2019, 14:09 IST
ಸ್ಟಾರ್ಟ್‌ಅಪ್‌
ಸ್ಟಾರ್ಟ್‌ಅಪ್‌   

ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶವು (ಎನ್‌ಸಿಆರ್‌) ನವೋದ್ಯಮಗಳ ಸ್ಥಾಪನೆ ಮತ್ತು ನೆಲೆ ಕಲ್ಪಿಸಿಕೊಡುವಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿ ಇದೆ.

ಸ್ಟಾರ್ಟ್‌ಅಪ್‌ ಮತ್ತು ₹7,000 ಕೋಟಿ ಮೌಲ್ಯದ ಯಶಸ್ವಿ ನವೋದ್ಯಮಗಳು (ಯುನಿಕಾರ್ನ್‌) ದೆಹಲಿ –ಎನ್‌ಸಿಆರ್‌ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ದ ಇಂಡಸ್‌ ಎಂಟರ್‌ಪ್ರಿನ್ಯೂಅರ್ಸ್‌ (ಟಿಐಇ–ಟೈ) ಸಂಸ್ಥೆ ನಡೆಸಿದ ಅಧ್ಯಯನ ವರದಿ ತಿಳಿಸಿದೆ.

ಈ ಹೊಸ ಉದ್ದಿಮೆಗಳು 2009 ರಿಂದ 2019ರ ಅವಧಿಯಲ್ಲಿ ಆರಂಭಗೊಂಡಿವೆ. ದೇಶದಲ್ಲಿನ ಸ್ಟಾರ್ಟ್‌ಅಪ್‌ಗಳ ಪೈಕಿ ದೆಹಲಿ – ಎನ್‌ಸಿಆರ್‌ ಶೇ 23ರಷ್ಟು ಪಾಲು ಹೊಂದಿದೆ. ದೆಹಲಿ – ಎನ್‌ಸಿಆರ್ಪ್ರದೇಶದಲ್ಲಿಯೇ ದೆಹಲಿ (4,491), ಗುರುಗ್ರಾಂ (1,544) ಮತ್ತು ನೊಯಿಡಾ 1,004 ಸ್ಟಾರ್ಟ್‌ಅಪ್‌ಗಳನ್ನು ಹೊಂದಿವೆ. ₹ 7,000 ಕೋಟಿ ಮೌಲ್ಯದ 10 ಯಶಸ್ವಿ ಸ್ಟಾರ್ಟ್‌ಅಪ್‌ಗಳನ್ನೂ (ಯುನಿಕಾರ್ನ್‌) ದೆಹಲಿ– ಎನ್‌ಸಿಆರ್‌ ಹೊಂದಿದೆ. ಬೆಂಗಳೂರಿನಲ್ಲಿ ಯುನಿಕಾರ್ನ್‌ಗಳ ಸಂಖ್ಯೆ (9) ಮುಂಬೈ (2), ಪುಣೆ ಮತ್ತು ಚೆನ್ನೈ ತಲಾ 1 ಹೊಂದಿವೆ.

ADVERTISEMENT

ಜಾಗತಿಕ ಐದು ಮುಂಚೂಣಿ ಸ್ಟಾರ್ಟ್‌ಅಪ್‌ ಕೇಂದ್ರಗಳಲ್ಲಿ ದೆಹಲಿ –ಎನ್‌ಸಿಆರ್‌ ಒಂದಾಗಿದೆ. ಮುಂಬರುವ ದಿನಗಳಲ್ಲಿ ಇವುಗಳ ಸಂಖ್ಯೆಯು ಇನ್ನಷ್ಟು ಹೆಚ್ಚಲಿದೆ. 2013ರಿಂದೀಚೆಗೆ ಪ್ರತಿ ವರ್ಷ ಒಂದು ಹೊಸ ‘ಯುನಿಕಾರ್ನ್‌’ ಇಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ. ಇವು ನಿರ್ದಿಷ್ಟ ವಲಯಕ್ಕೆ ಸೀಮಿತಗೊಂಡಿಲ್ಲ. ಹಣಕಾಸು ತಂತ್ರಜ್ಞಾನ, ಇ–ಕಾಮರ್ಸ್‌, ಸಾರಿಗೆ, ಆಹಾರ, ಇಂಧನ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿವೆ ಎಂದು ‘ಟೈ’ನ ದೆಹಲಿ – ಎನ್‌ಸಿಆರ್‌ ಅಧ್ಯಕ್ಷ ರಾಜನ್‌ ಆನಂದನ್‌ ಹೇಳಿದ್ದಾರೆ.

ನಗರ ಸ್ಟಾರ್ಟ್‌ಅಪ್‌ ಸಂಖ್ಯೆ
ದೆಹಲಿ–ಎನ್‌ಸಿಆರ್‌ 7,039
ಬೆಂಗಳೂರು 5,234
ಮುಂಬೈ 3,829
ಹೈದರಾಬಾದ್‌ 1,940

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.