ADVERTISEMENT

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರ ಇಳಿಕೆ

‘ಎಂಸಿಎಲ್‌ಆರ್‌’ ಕಡಿತ * ಗೃಹ ಸಾಲ ಅಗ್ಗ: 10ರಿಂದ ಜಾರಿ

ಪಿಟಿಐ
Published 7 ಫೆಬ್ರುವರಿ 2020, 19:30 IST
Last Updated 7 ಫೆಬ್ರುವರಿ 2020, 19:30 IST
ಎಸ್‌ಬಿಐ ಲಾಂಛನ
ಎಸ್‌ಬಿಐ ಲಾಂಛನ   
""

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರ (ಎಂಸಿಎಲ್‌ಆರ್‌) ಮತ್ತು ಸ್ಥಿರ ಠೇವಣಿಗಳ ಬಡ್ಡಿ ದರಗಳನ್ನು ಇಳಿಸಿದೆ.

ಹೊಸ ದರಗಳು ಇದೇ 10ರಿಂದ ಜಾರಿಗೆ ಬರಲಿವೆ.

‘ಎಂಸಿಎಲ್‌ಆರ್‌’ ಶೇ 0.5ರಷ್ಟು ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.10 ರಿಂದ ಶೇ 0.50ರವರೆಗೆ ತಗ್ಗಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 9ನೇ ಬಾರಿಗೆ ‘ಎಂಸಿಎಲ್‌ಆರ್‌’ ಕಡಿಮೆಯಾಗಿದೆ.

ADVERTISEMENT

ವಾರ್ಷಿಕ ‘ಎಂಸಿಎಲ್‌ಆರ್‌’ ಈಗ ಶೇ 7.90 ರಿಂದ ಶೇ 7.85ಕ್ಕೆ ಇಳಿದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರ ಜತೆಗೆ, ಬ್ಯಾಂಕ್‌ಗಳ ನಿಧಿಗಳ ವೆಚ್ಚ ಅಗ್ಗಗೊಳಿಸಿರುವ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಪ್ರಕಟಿಸಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿರುವ ಕಾರಣಕ್ಕೆ ₹ 2 ಕೋಟಿಗಿಂತ ಕಡಿಮೆ ಮೊತ್ತದ ರಿಟೇಲ್‌ ಸ್ಥಿರ ಠೇವಣಿ ಮತ್ತು ₹ 2 ಕೋಟಿಗಿಂತ ಹೆಚ್ಚಿನ ಮೊತ್ತದ ಸಗಟು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ.

ರಿಟೇಲ್‌ ಸ್ಥಿರ ಠೇವಣಿಗಳಿಗೆ ಶೇ 0.10 ರಿಂದ ಶೇ 0.50 ಮತ್ತು ಸಗಟು ಸ್ಥಿರ ಠೇವಣಿಗಳಿಗೆ ಶೇ 0.25 ರಿಂದ ಶೇ 0.50ರಂತೆ ಬಡ್ಡಿ ದರ ಇಳಿಸಲಾಗಿದೆ.

ಹೊಸ ಠೇವಣಿಗಳು ಮತ್ತು ಸದ್ಯದಲ್ಲೇ ಎಫ್‌ಡಿ ನವೀಕರಣ ಮಾಡುವವರಿಗೆ ಈ ದರಗಳು ಅನ್ವಯವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.