ADVERTISEMENT

ಸಕಾರಾತ್ಮಕ ವಹಿವಾಟು; ಷೇರು ಸೂಚ್ಯಂಕಗಳು ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 15:55 IST
Last Updated 1 ಏಪ್ರಿಲ್ 2024, 15:55 IST
ಷೇರು ಸೂಚ್ಯಂಕ
ಷೇರು ಸೂಚ್ಯಂಕ   

ಮುಂಬೈ: 2024–25ರ ಹಣಕಾಸು ವರ್ಷದ ಆರಂಭದ ಮೊದಲ ದಿನದಂದು ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ. ವಿದೇಶಿ ಬಂಡವಾಳ ಒಳಹರಿವು ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟಿನಿಂದ ಷೇರು ಸೂಚ್ಯಂಕ ಗಳಿಕೆ ಕಂಡವು.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 363 ಅಂಶ ಹೆಚ್ಚಳವಾಗಿ 74,041ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 74,254ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 135 ಅಂಶ ಏರಿಕೆಯಾಗಿ 22,529ಕ್ಕೆ ಕೊನೆಗೊಂಡಿತು. 

ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಸ್ಟೀಲ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಎನ್‌ಟಿಪಿಸಿ, ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರು ಮೌಲ್ಯ ಏರಿಕೆ ಕಂಡಿದೆ. ಟೈಟನ್‌, ನೆಸ್ಲೆ, ಭಾರ್ತಿ ಏರ್‌ಟೆಲ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರು ಮೌಲ್ಯ ಇಳಿಕೆ ಆಗಿದೆ. 

ADVERTISEMENT

ಅದಾನಿ ಷೇರು ಏರಿಕೆ

ಅದಾನಿ ಸಮೂಹದ ಎಲ್ಲ ಷೇರಿನ ಮೌಲ್ಯ ಸೋಮವಾರ ಏರಿಕೆ ಕಂಡಿದೆ.

ಅದಾನಿ ಎನರ್ಜಿ ಸಲ್ಯೂಷನ್ಸ್‌ ಶೇ 8.40, ಎನ್‌ಡಿಟಿವಿ ಶೇ 6.16, ಅದಾನಿ ವಿಲ್ಮರ್‌ ಶೇ 5.92, ಅದಾನಿ ಪವರ್‌ ಶೇ 4.99, ಅದಾನಿ ಟೋಟಲ್‌ ಗ್ಯಾಸ್‌ ಶೇ 4.81, ಅದಾನಿ ಗ್ರೀನ್‌ ಎನರ್ಜಿ ಶೇ 2.93, ಅದಾನಿ ಪೋರ್ಟ್ಸ್‌ ಶೇ 2.56, ಎಸಿಸಿ ಶೇ 2.38, ಅದಾನಿ ಎಂಟರ್‌ಪ್ರೈಸಸ್‌ ಶೇ 1.80 ಮತ್ತು ಅಂಬುಜಾ ಸಿಮೆಂಟ್ಸ್‌ ಶೇ 1.49ರಷ್ಟು ಷೇರಿನ ಮೌಲ್ಯ ಏರಿಕೆ ಆಗಿದೆ. ಸಮೂಹದ ಎಲ್ಲ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ₹16.30 ಲಕ್ಷ ಕೋಟಿಗೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.