ADVERTISEMENT

ವಹಿವಾಟು ಚೇತರಿಕೆ

ಸಗಟು ಹಣದುಬ್ಬರ ಇಳಿಕೆ: 9 ದಿನಗಳ ಸೂಚ್ಯಂಕದ ಇಳಿಮುಖ ಓಟಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST
   

ಮುಂಬೈ : ದೇಶದ ಷೇರುಪೇಟೆಗಳಲ್ಲಿ 9 ದಿನಗಳಿಂದ ಇಳಿಮುಖವಾಗಿದ್ದ ಸೂಚ್ಯಂಕಗಳು ಮಂಗಳವಾರ ಚೇತರಿಕೆ ಹಾದಿಗೆ ಮರಳಿದವು.

ಏಪ್ರಿಲ್‌ನ ಹಣದುಬ್ಬರದ ಅಂಕಿ–ಅಂಶಗಳಿಂದಾಗಿ ಆರ್‌ಬಿಐ ಮುಂದಿನ ತಿಂಗಳ ಸಭೆಯಲ್ಲಿ ಬಡ್ಡಿದರ ತಗ್ಗಿಸುವ ವಿಶ್ವಾಸ ವ್ಯಕ್ತವಾಗಿದೆ. ಹೀಗಾಗಿಹಣಕಾಸು ಮತ್ತು ಇಂಧನ ವಲಯಗಳ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡುಕೊಂಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 228 ಅಂಶ ಚೇತರಿಕೆ ಕಂಡು 37,318 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ADVERTISEMENT

ಷೇರುಪೇಟೆಯ ಬಂಡವಾಳ ಮೌಲ್ಯ ₹ 145.18 ಲಕ್ಷ ಕೋಟಿಗಳಷ್ಟಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 74 ಅಂಶಗಳಷ್ಟು ಹೆಚ್ಚಾಗಿ 11,222 ಅಂಶಗಳಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.