ADVERTISEMENT

ಫ್ಲಿಪ್‌ಕಾರ್ಟ್, ಅಮೆಜಾನ್ ವಿರುದ್ಧದ ಸಿಸಿಐ ತನಿಖೆ ತಡೆಗೆ ಸುಪ್ರೀಂ ನಿರಾಕರಣೆ

ಡೆಕ್ಕನ್ ಹೆರಾಲ್ಡ್
Published 9 ಆಗಸ್ಟ್ 2021, 7:39 IST
Last Updated 9 ಆಗಸ್ಟ್ 2021, 7:39 IST
ಸಾಂದರ್ಭಿಕ ಚಿತ್ರ (ರಾಯಿಟರ್ಸ್ ಕೃಪೆ)
ಸಾಂದರ್ಭಿಕ ಚಿತ್ರ (ರಾಯಿಟರ್ಸ್ ಕೃಪೆ)   

ನವದೆಹಲಿ: ಇ–ಕಾಮರ್ಸ್‌ ಕಂಪನಿಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ತನಿಖೆ ನಡೆಸಲು ಮುಂದಾಗಿರುವುದಕ್ಕೆ ತಡೆಯೊಡ್ಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸ್ಪರ್ಧಾ ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ವಿರುದ್ಧ ಸಿಸಿಐ ತನಿಖೆ ಕೈಗೆತ್ತಿಕೊಂಡಿದೆ.

ತನಿಖೆಗೆ ಸಹಕರಿಸಲು ಕಂಪನಿಗಳಿಗೆ ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ADVERTISEMENT

ಸ್ಪರ್ಧಾತ್ಮಕ ವಿರೋಧಿ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಕಾಯ್ದೆ –2020 ಅನ್ನು ಈ ಸಂಸ್ಥೆಗಳು ಉಲ್ಲಂಘಿಸುತ್ತಿವೆ ಎಂಬ ಆರೋಪದಲ್ಲಿ ಸಿಸಿಐ ತನಿಖೆಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.