ADVERTISEMENT

ಶೇ 25ರವರೆಗೆ ರಿಯಾಯಿತಿ ಕೊಡುಗೆ: ತನಿಷ್ಕ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 22:32 IST
Last Updated 18 ಜೂನ್ 2020, 22:32 IST
ತನಿಷ್ಕ್‌
ತನಿಷ್ಕ್‌   

ಬೆಂಗಳೂರು: ದೇಶದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ ಆಗಿರುವ ತನಿಷ್ಕ್, ತನ್ನ ಗ್ರಾಹಕರಿಗೆಚಿನ್ನಾಭರಣಗಳ ಮೇಕಿಂಗ್‌ ಚಾರ್ಜ್‌ ಮೇಲೆ ಹಾಗೂ ವಜ್ರಾಭರಣಗಳ ಮೌಲ್ಯದ ಮೇಲೆ ಶೇ 25ರವರೆಗೆ ರಿಯಾಯಿತಿ ಕೊಡುಗೆ ಘೊಷಿಸಿದೆ. ಈ ಕೊಡುಗೆಯು ಇದೇ 22ರವರೆಗೂ ಇರಲಿದೆ.

‘ಲಾಕ್‌ಡೌನ್ ಬಳಿಕ ಇದೀಗ ಹೊಸದಾಗಿ ಸಹಜ ಜೀವನ ಆರಂಭಿಸುತ್ತಿದ್ದು, ನವೋಲ್ಲಾಸದ ಆರಂಭಕ್ಕೆ ಸಜ್ಜಾಗಿದ್ದೇವೆ. ಈ ಸಂದರ್ಭದಲ್ಲಿ ತನಿಷ್ಕ್‌ ಎಲ್ಲರಿಗೂ ಶುಭ ಆರಂಭದ ಯಶಸ್ಸನ್ನು ಕೋರಲಿದೆ. ಹೊಸ ಸಾಧ್ಯತೆಗಳು ಭರವಸೆ ಮೂಡಿಸಲಿ. ನಾವು ಹೊಸ ಆರಂಭಕ್ಕಾಗಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡುತ್ತಿದ್ದೇವೆ’ ಎಂದು ಕಂಪನಿಯ ಜುವೆಲರಿ ವಿಭಾಗದ ಪ್ರಧಾನ ವ್ಯವಸ್ಥಾಪಕ ರಂಜನಿ ಕೃಷ್ಣಮೂರ್ತಿ ಹೇಳಿದ್ದಾರೆ.

ಎರಡು ತಿಂಗಳಿನಲ್ಲಿ ತನಿಷ್ಕ್‌ ತನ್ನ ವಿಸ್ತೃತ ಶ್ರೇಣಿಗೆ 170ಕ್ಕೂ ಅಧಿಕ ಉತ್ಪನ್ನಗಳನ್ನು ಸೇರಿಸಿದ್ದು, ಆಕರ್ಷಕವಾದ ಕಿವಿಯೋಲೆ, ಉಂಗುರ ಮತ್ತು ಪೆಂಡೆಂಟ್‌ಗಳು ಇದರಲ್ಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.