ADVERTISEMENT

ಪ್ರೇಮಿಗಳ ದಿನಕ್ಕೆ ತನಿಷ್ಕ್‌ನಿಂದ ಹೊಸ ವಜ್ರಾಭರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 19:07 IST
Last Updated 10 ಫೆಬ್ರುವರಿ 2021, 19:07 IST
ತನಿಷ್ಕ್‌ನ ವಜ್ರದ ಉಂಗುರ
ತನಿಷ್ಕ್‌ನ ವಜ್ರದ ಉಂಗುರ   

ಬೆಂಗಳೂರು: ಚಿನ್ನಾಭರಣಗಳ ಪ್ರಮುಖ ಬ್ರ್ಯಾಂಡ್‌ ತನಿಷ್ಕ್‌, ಪ್ರೇಮಿಗಳ ದಿನದ ಅಂಗವಾಗಿ ಆಧುನಿಕ ಶ್ರೇಣಿಯ ವಜ್ರದ ಆಭರಣಗಳನ್ನು ಪರಿಚಯಿಸಿದೆ. ಇವುಗಳ ಮೌಲ್ಯದ ಮೇಲೆ ಶೇ 21ರವರೆಗೂ ರಿಯಾಯಿತಿ ನೀಡಲಿದೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರವೇ ಇರಲಿದೆ ಎಂದು ತಿಳಿಸಿದೆ.

‘ಪ್ರೇಮಿಗಳ ದಿನ ಆಚರಿಸಲು ತನಿಷ್ಕ್‌ನ ಅದ್ಭುತ ಶ್ರೇಣಿಯ ವಜ್ರದ ಆಭರಣಗಳನ್ನು ವಿಶೇಷ ವ್ಯಕ್ತಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ನಿಶ್ಚಿತಾರ್ಥದ ಉಂಗುರಗಳು, ಸುಂದರವಾದ ಕಡಗಗಳು, ಆಕರ್ಷಕ ಪೆಂಡೆಂಟ್‌ಗಳು ಮತ್ತು ಕಿವಿಯೋಲೆ, ಹೃದಯದ ಆಕಾರದ ವಜ್ರ ವಿನ್ಯಾಸಗಳು ಲಭ್ಯವಿವೆ’ ಎಂದು ಕಂಪನಿ ಹೇಳಿದೆ.

ಈ ವಜ್ರದ ಆಭರಣಗಳು ₹ 10 ಸಾವಿರದ ಬೆಲೆಯಿಂದ ಆರಂಭವಾಗಲಿವೆ. ತನಿಷ್ಕ್‌ ಮಳಿಗೆಗಳಲ್ಲಿ ಅಲ್ಲದೆ, ಜಾಲತಾಣ www.tanishq.co.in ನಲ್ಲಿಯೂ ಖರೀದಿಸಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.