ADVERTISEMENT

ಮೊಬೈಲ್‌ ಸೇವಾ ಶುಲ್ಕ ಹೆಚ್ಚಳ ಅವಶ್ಯ: ಮಿತ್ತಲ್

ಪಿಟಿಐ
Published 22 ನವೆಂಬರ್ 2020, 16:37 IST
Last Updated 22 ನವೆಂಬರ್ 2020, 16:37 IST
ಭಾರ್ತಿ ಏರ್‌ಟೆಲ್‌
ಭಾರ್ತಿ ಏರ್‌ಟೆಲ್‌   

ನವದೆಹಲಿ: ‘ಮೊಬೈಲ್‌ ಸೇವೆಗಳ ಶುಲ್ಕ ಹೆಚ್ಚಿಸುವ ಅವಶ್ಯಕತೆ ಇದೆ. ಆದರೆ, ಈ ಕುರಿತು ನಿರ್ಧರಿಸುವ ಮೊದಲು ಮಾರುಕಟ್ಟೆ ಸ್ಥಿತಿಯನ್ನು ಪರಿಗಣಿಸಲಾಗುವುದು’ ಎಂದು ಭಾರ್ತಿ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್‌ ಮಿತ್ತಲ್‌ ಹೇಳಿದ್ದಾರೆ.

‘ಸೇವಾ ಶುಲ್ಕ ಹೆಚ್ಚಾಗಬೇಕು ಎಂದು ಏರ್‌ಟೆಲ್‌ ಬಲವಾಗಿ ಅಭಿಪ್ರಾಯ‍ಟ್ಟಿದೆ. ಸದ್ಯದ ಸೇವಾ ಶುಲ್ಕವು ಅಸ್ಥಿರವಾಗಿದೆ. ಆದರೆ, ಉದ್ಯಮ ಅಥವಾ ನಿಯಂತ್ರಣ ವ್ಯವಸ್ಥೆ ನಿರ್ಧಾರ ತೆಗೆದುಕೊಳ್ಳದ ಹೊರತು ಏರ್‌ಟೆಲ್‌ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಪಿಟಿಐ ಸುದ್ದಿಸಂಸ್ಥಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮುಂದಿನ ಪೀಳಿಗೆಯ 5ಜಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಚೀನಾದ ದೂರಸಂಪರ್ಕ ಉಪಕರಣ ಮಾರಾ ಟಗಾರಿಗೆ ಅವಕಾಶ ನೀಡಲಾಗುವುದೇ ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಏನನ್ನು ನಿರ್ಧರಿಸುತ್ತದೆಯೋ ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.