ADVERTISEMENT

ಟಾಟಾ ಮೋಟರ್ಸ್ ನಷ್ಟದಲ್ಲಿ ಇಳಿಕೆ

ಪಿಟಿಐ
Published 26 ಜುಲೈ 2021, 16:25 IST
Last Updated 26 ಜುಲೈ 2021, 16:25 IST

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯ ನಿವ್ವಳ ನಷ್ಟವು ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇಳಿಕೆ ಆಗಿದೆ. ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ₹ 4,450 ಕೋಟಿ ನಷ್ಟ ದಾಖಲಿಸಿದೆ.

ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ನಷ್ಟವು ₹ 8,444 ಕೋಟಿ ಆಗಿತ್ತು. ಕೋವಿಡ್‌ ಸಾಂಕ್ರಮಿಕದಿಂದಾಗಿ ವಹಿವಾಟಿನ ಮೇಲೆ ಭಾರಿ ಪರಿಣಾಮ ಉಂಟಾಗಿದ್ದರಿಂದ ಈ ಪ್ರಮಾಣದಲ್ಲಿ ನಷ್ಟವಾಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಾರ್ಯಾಚರಣೆಯಿಂದ ಬಂದಿರುವ ಒಟ್ಟಾರೆ ವರಮಾನವು ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದ್ದ ₹ 31,983 ಕೋಟಿಗಳಿಗೆ ಹೋಲಿಸಿದರೆ ಈ ಬಾರಿ ₹ 66,406 ಕೋಟಿಗೆ ಏರಿದೆ.

ADVERTISEMENT

ಲಾಕ್‌ಡೌನ್‌ಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಮಾರುಕಟ್ಟೆಗಳು ಮತ್ತೆ ತೆರೆದಂತೆ ಸ್ಪರ್ಧಾತ್ಮಕ ಬೆಳವಣಿಗೆಯನ್ನು ತಲುಪಲು ವ್ಯಾಪಾರದಲ್ಲಿ ಚುರುಕುತನ ಅವಳಡಿಸಿಕೊಂಡಿದ್ದು ನೆರವಾಯಿತು ಎಂದು ಟಾಟಾ ಮೋಟರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್‌ ವಾಘ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.