ನವದೆಹಲಿ: ವಿದ್ಯುತ್‌ಚಾಲಿತ ವಾಹನಗಳು ಸೇರಿ ಪ್ರಯಾಣಿಕ ವಾಹನಗಳ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ. ಈ ಪರಿಷ್ಕೃತ ದರವು ಏಪ್ರಿಲ್‌ನಿಂದ ಜಾರಿಗೆ ಬರಲಿದೆ ಎಂದು ಟಾಟಾ ಮೋಟರ್ಸ್ ಮಂಗಳವಾರ ತಿಳಿಸಿದೆ.
ಜನವರಿಯಲ್ಲಿ ಕಂಪನಿಯು ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇ 3ರ ವರೆಗೆ ಹೆಚ್ಚಿಸಿತ್ತು. ಈ ವರ್ಷದಲ್ಲಿ ಎರಡನೇ ಬಾರಿಗೆ ಹೆಚ್ಚಿಸಲು ಮುಂದಾಗಿದೆ.
ತಯಾರಿಕಾ ಮತ್ತು ಕಾರ್ಯಾಚರಣೆ ವೆಚ್ಚವನ್ನು ಸರಿದೂಗಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ, ಎಷ್ಟು ಬೆಲೆ ಏರಿಕೆ ಮಾಡಲಿದೆ ಎಂಬ ಬಗ್ಗೆ ಕಂಪನಿಯು ತಿಳಿಸಿಲ್ಲ.
ಈಗಾಗಲೇ, ಮಾರುತಿ ಸುಜುಕಿ ಇಂಡಿಯಾವು ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಶೇ 4ರಷ್ಟು ಮತ್ತು ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ದರವನ್ನು ಶೇ 2ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.