ಬೆಂಗಳೂರು (ರಾಯಿಟರ್ಸ್): ಟಾಟಾ ಸಮೂಹದ ಒಡೆತನದಲ್ಲಿರುವ ಟೈಟನ್ ಕಂಪನಿಯ ಸೆಪ್ಟೆಂಬರ್ ತ್ರೈಮಾಸಿಕದ ಲಾಭವು ಶೇಕಡ 33.7ರಷ್ಟು ಹೆಚ್ಚಾಗಿದೆ. ಹಬ್ಬಗಳು ಹಾಗೂ ಮದುವೆಯ ಋತುವಿನಲ್ಲಿ ಚಿನ್ನದ ಮಾರಾಟ ಹೆಚ್ಚಾಗಿದ್ದು, ಲಾಭ ಹೆಚ್ಚಳಕ್ಕೆ ಒಂದು ಎಂದು ಕಂಪನಿ ಹೇಳಿದೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 8,308 ಕೋಟಿ ವರಮಾನ ಗಳಿಸಿದೆ. ತೆರಿಗೆ ಪೂರ್ವದ ಲಾಭ ₹1,155 ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹ 868 ಕೋಟಿ ಲಾಭ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.