ನವದೆಹಲಿ: ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರ ಹೆಸರನ್ನು ಟಾಟಾ ಟ್ರಸ್ಟ್ಸ್ ಮೂರನೆಯ ಅವಧಿಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್ಸ್ ಶೇಕಡ 66ರಷ್ಟು ಷೇರು ಹೊಂದಿವೆ. ಟಾಟಾ ಟ್ರಸ್ಟ್ಸ್ ಎಂಬುದು ದಾನ ಕಾರ್ಯಗಳಲ್ಲಿ ತೊಡಗಿರುವ ವಿವಿಧ ಟ್ರಸ್ಟ್‌ಗಳ ಒಕ್ಕೂಟದಂತಿದೆ. ಈ ಶಿಫಾರಸು ಕುರಿತಾಗಿ ಟಾಟಾ ಸನ್ಸ್ ಯಾವ ತೀರ್ಮಾನ ತೆಗೆದುಕೊಂಡಿದೆ ಎಂಬ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.
‘ಮೂರನೆಯ ಅವಧಿಗೆ ಚಂದ್ರಶೇಖರನ್ ಅವರನ್ನು ನೇಮಕ ಮಾಡುವಂತೆ ಟಾಟಾ ಟ್ರಸ್ಟ್ಸ್ ಕಡೆಯಿಂದ ಶಿಫಾರಸು ಬಂದಿದೆ. ಈಗ ಈ ಕುರಿತಾಗಿ ಟಾಟಾ ಸನ್ಸ್ ತೀರ್ಮಾನ ತೆಗೆದುಕೊಳ್ಳಬೇಕಿದೆ’ ಎಂದು ಮೂಲವೊಂದು ವಿವರಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿ ಟಾಟಾ ಸನ್ಸ್‌ಗೆ ಕಳುಹಿಸಿದ ಇ–ಮೇಲ್‌ಗೆ ಪ್ರತಿಕ್ರಿಯೆ ಲಭಿಸಿಲ್ಲ. ಚಂದ್ರಶೇಖರನ್ ಅವರ ಆಡಳಿತ ಅವಧಿಯು 2027ರ ಫೆಬ್ರುವರಿಯಲ್ಲಿ ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.