ADVERTISEMENT

ಟಾಟಾ ಟೆಕ್ನಾಲಜೀಸ್‌ ಐಪಿಒ: ಸೆಬಿಗೆ ಕರಡು ದಾಖಲೆಪತ್ರ

ಪಿಟಿಐ
Published 10 ಮಾರ್ಚ್ 2023, 13:29 IST
Last Updated 10 ಮಾರ್ಚ್ 2023, 13:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟಾಟಾ ಮೋಟರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್‌ ಲಿಮಿಟೆಡ್‌ ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ಮೂಲಕ ಷೇರುಗಳನ್ನು ಮಾರಾಟ ಮಾಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಪ್ರಾಥಮಿಕ ದಾಖಲೆ ಪತ್ರಗಳನ್ನು ಸಲ್ಲಿಸಿದೆ.

ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ ಕಂಪನಿಯು ಷೇರುಗಳನ್ನು ವಹಿವಾಟಿಗೆ ಬಿಡುಗಡೆ ಮಾಡುವ ಉದ್ದೇಶವನ್ನು ಹೊಂದಿದೆ.

ಕಂಪನಿ ಸಲ್ಲಿಸಿರುವ ಕರಡು ದಾಖಲೆ ಪತ್ರಗಳ (ಡಿಆರ್‌ಎಚ್‌ಪಿ) ಪ್ರಕಾರ ಕಂಪನಿಯು 9.57 ಕೋಟಿಯವರೆಗೆ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದೆ. ಆಫರ್‌ ಫಾರ್‌ ಸೇಲ್‌ (ಒಎಫ್‌ಎಸ್‌) ಮೂಲಕ ಕಂಪನಿಯ ಮಾತೃಸಂಸ್ಥೆ ಟಾಟಾ ಮೋಟರ್ಸ್‌ 8.11 ಕೋಟಿ ಷೇರುಗಳನ್ನು ಅಥವಾ ಶೇ 20ರಷ್ಟು ಷೇರುಗಳನ್ನು ಮಾರಾಟ ಮಾಡಲಿದೆ. ಆಲ್ಫಾ ಟಿಸಿ ಹೋಲ್ಡಿಂಗ್ಸ್‌ 97.16 ಲಕ್ಷ ಮತ್ತು ಟಾಟಾ ಕ್ಯಾಪಿಟಲ್‌ ಗ್ರೋತ್ ಫಂಡ್ಸ್‌ 48.58 ಲಕ್ಷದವರೆಗೆ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿವೆ.

ADVERTISEMENT

2022ರ ಡಿಸೆಂಬರ್‌ಗೆ ಅಂತ್ಯವಾದ ಒಂಬತ್ತು ತಿಂಗಳ ಅವಧಿಯಲ್ಲಿ ಕಂಪನಿಯ ಕಾರ್ಯಾಚರಣಾ ವರಮಾನ ₹ 3,011 ಕೋಟಿ ಆಗಿದೆ. 2021ರ ಡಿಸೆಂಬರ್‌ಗೆ ಅಂತ್ಯವಾದ ಒಂಬತ್ತು ತಿಂಗಳ ಅವಧಿಯಲ್ಲಿ ಕಾರ್ಯಾಚರಣಾ ವರಮಾನ ₹ 2,607 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.