ನವದೆಹಲಿ: ಸಂಸ್ಥಾಪಕರು ಹಾಗೂ ನಾಯಕರು ಹೊಂದಿದ್ದ ಉದ್ದೇಶಗಳನ್ನು ನಿರಂತರವಾಗಿ ಈಡೇರಿಸಲು ಟಾಟಾ ಟ್ರಸ್ಟ್ಸ್‌ಗೆ ಯಾವಾಗಲೂ ಟಾಟಾ ಕುಟುಂಬದವರ ಮುಂದಾಳತ್ವವೇ ಇರಬೇಕು ಎಂದು ರತನ್ ಟಾಟಾ ಅವರ ಜೀವನ ಚರಿತ್ರೆಯ ಲೇಖಕ ಥಾಮಸ್ ಮ್ಯಾಥ್ಯೂ ಹೇಳಿದ್ದಾರೆ.
ರತನ್ ಟಾಟಾ ಅವರ ಮರಣದ ನಂತರ ಟಾಟಾ ಟ್ರಸ್ಟ್ಸ್‌ಗಳಲ್ಲಿ ಆಂತರಿಕ ಸಂಘರ್ಷ ನಡೆದಿರುವ ಸಂದರ್ಭದಲ್ಲಿ ಮ್ಯಾಥ್ಯೂ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.
ಟಾಟಾ ಟ್ರಸ್ಟ್ಸ್‌ನಲ್ಲಿನ ಈಗಿನ ಆಂತರಿಕ ಬಿಕ್ಕಟ್ಟು ‘ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯ’ ಎಂದು ಅವರು ಹೇಳಿದ್ದಾರೆ. ಯಾವುದೇ ಬದಲಾವಣೆಯ ಸಂದರ್ಭದಲ್ಲಿ ಈ ರೀತಿ ಆಗುತ್ತದೆ. ಇವುಗಳಿಂದ ಟಾಟಾ ಸಮೂಹದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಟಾಟಾ ಸಮೂಹವು ಬಹಳ ದೊಡ್ಡದಾಗಿದೆ, ಬಹಳ ಶಕ್ತಿಯುತವಾಗಿದೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಟಾಟಾ ಸಮೂಹದ ಈಗಿನ ನಾಯಕರು ರತನ್ ಟಾಟಾ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಮ್ಯಾಥ್ಯೂ ಅವರು, ‘ಟಾಟಾ ಸನ್ಸ್‌ನ ಈಗಿನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಟಾಟಾ ಸಮೂಹದ ಮೌಲ್ಯಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.