
ಪಿಟಿಐ
ನವದೆಹಲಿ: ತೆರಿಗೆ ಪಾವತಿಸುವವರು ಪ್ರತಿ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ ಒಂದು ಬಾರಿ ಮಾತ್ರ ಪರಿಷ್ಕೃತ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯ ಅಧ್ಯಕ್ಷ ಜೆ.ಬಿ. ಮೊಹಾಪಾತ್ರ ಬುಧವಾರ ತಿಳಿಸಿದ್ದಾರೆ.
ವಿವರ ಸಲ್ಲಿಸುವುದನ್ನು ಗಂಭೀರ ಕಾರಣಗಳಿಂದಾಗಿ ಮರೆತವರಿಗೆ ಒಂದು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಯ ತೆರಿಗೆ ವಿವರವನ್ನು ತೆರಿಗೆ ಪಾವತಿದಾರರು, ತಾವು ವಿವರ ಸಲ್ಲಿಸಿದ ಎರಡು ವರ್ಷಗಳ ಒಳಗೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.