ಮುಂಬೈ: 2024–25ನೇ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಐ.ಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್) ನಿವ್ವಳ ಲಾಭದಲ್ಲಿ ಶೇ 1.68ರಷ್ಟು ಇಳಿಕೆಯಾಗಿದೆ.
ಕಂಪನಿಯು ಒಟ್ಟು ₹12,224 ಕೋಟಿ ಲಾಭ ಗಳಿಸಿದೆ.
ಹಣದುಬ್ಬರ ಏರಿಕೆ ಮತ್ತು ಜಾಗತಿಕ ಅನಿಶ್ಚಿತ ಸ್ಥಿತಿಯಿಂದಾಗಿ ಬೇಡಿಕೆ ಮಂದಗತಿಯಲ್ಲಿದೆ. ಇದರಿಂದ ಲಾಭದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.
ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ವರಮಾನ ₹64,479 ಕೋಟಿಯ ಆಗಿದೆ, 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 5.3ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಪ್ರತಿ ಈಕ್ವಿಟಿ ಷೇರಿಗೆ ₹30 ಲಾಭಾಂಶ (ಡಿವಿಡೆಂಡ್) ನೀಡಲು ಟಿಸಿಎಸ್ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.