ADVERTISEMENT

ಟಿಸಿಎಸ್‌: ₹ 8,118 ಕೋಟಿ ನಿವ್ವಳ ಲಾಭ

ಪಿಟಿಐ
Published 17 ಜನವರಿ 2020, 19:45 IST
Last Updated 17 ಜನವರಿ 2020, 19:45 IST
ರಾಜೇಶ್‌ ಗೋಪಿನಾಥನ್‌
ರಾಜೇಶ್‌ ಗೋಪಿನಾಥನ್‌   

ಮುಂಬೈ : ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌), ಮೂರನೇ ತ್ರೈಮಾಸಿಕದಲ್ಲಿ ₹ 8,118 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹ 8,105 ಕೋಟಿ ಲಾಭಕ್ಕೆ ಹೋಲಿಸಿದರೆ ಕೇವಲ ಶೇ 0.2ರಷ್ಟು ಹೆಚ್ಚಳ ಕಂಡಿದೆ.

‘ಕಂಪನಿಯ ವರಮಾನವು ವರ್ಷದ ಹಿಂದಿನ ₹ 37,338 ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 6.7ರಷ್ಟು ಏರಿಕೆ ದಾಖಲಿಸಿ ₹ 39,854 ಕೋಟಿಗೆ ತಲುಪಿದೆ’ ಎಂದು ಕಂಪನಿಯ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮಧ್ಯಂತರ ಲಾಭಾಂಶ: ಕಂಪನಿಯು ₹ 1 ಮುಖಬೆಲೆಯ ಪ್ರತಿ ಷೇರಿಗೆ ₹ 5ರಂತೆ ಮೂರನೇ ಮಧ್ಯಂತರ ಲಾಭಾಂಶ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.