ADVERTISEMENT

ಭಾರಿ ಉದ್ಯೋಗ ಕಡಿತದ ನಡುವೆಯೇ TCS ಉದ್ಯೋಗಿಗಳ ವೇತನ ಹೆಚ್ಚಳ

ಪಿಟಿಐ
Published 7 ಆಗಸ್ಟ್ 2025, 15:56 IST
Last Updated 7 ಆಗಸ್ಟ್ 2025, 15:56 IST
ಟಿಸಿಎಸ್
ಟಿಸಿಎಸ್   

ನವದೆಹಲಿ/ಬೆಂಗಳೂರು: ದೇಶದ ಅತಿದೊಡ್ಡ ಐ.ಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ತನ್ನ ಶೇ 80ರಷ್ಟು ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ.

ವೇತನ ಹೆಚ್ಚಳವು ಸೆಪ್ಟೆಂಬರ್ 1ರಿಂದ ಅನ್ವಯವಾಗಲಿದೆ ಎಂದು ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಅಧಿಕಾರಿಗಳಾದ ಮಿಲಿಂದ್ ಲಕ್ಕಡ್‌ ಮತ್ತು ಕೆ. ಸುದೀಪ್‌ ಉದ್ಯೋಗಿಗಳಿಗೆ ಕಳುಹಿಸಿದ ಇ–ಮೇಲ್‌ನಲ್ಲಿ ತಿಳಿಸಿದ್ದಾರೆ.

ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ಹೇಳಿದ ನಂತರ ಈ ವೇತನ ಹೆಚ್ಚಳ ನಿರ್ಧಾರ ಪ್ರಕಟಿಸಿದೆ.

ADVERTISEMENT

ಕಂಪನಿಯು ಪ್ರತಿವರ್ಷ ಏಪ್ರಿಲ್‌ನಲ್ಲಿ ವೇತನ ಹೆಚ್ಚಳ ಮಾಡುತ್ತಿತ್ತು. ಈ ಬಾರಿ ಐದು ತಿಂಗಳು ತಡವಾಗಿದೆ. ಜಾಗತಿಕವಾಗಿ ಬೇಡಿಕೆ ಕಡಿಮೆ ಆಗಿರುವುದು, ಅಮೆರಿಕದ ವಾಣಿಜ್ಯ ನೀತಿಯಲ್ಲಿನ ಅನಿಶ್ಚಿತತೆಯಿಂದ ವೇತನ ಏರಿಕೆ ತಡವಾಗಿದೆ.

ಟ್ರೈನಿಗಳಿಂದ ಆರಂಭಿಸಿ ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿರುವ ನೌಕರರವರೆಗೆ ವೇತನ ಹೆಚ್ಚಳ ಅನ್ವಯವಾಗಲಿದೆ. ಆದರೆ, ಉಳಿದ ಶೇ 20ರಷ್ಟು ಹಿರಿಯ ಉದ್ಯೋಗಿಗಳ ವೇತನ ಹೆಚ್ಚಳದ ಬಗ್ಗೆ ಇ–ಮೇಲ್‌ನಲ್ಲಿ ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.