ADVERTISEMENT

ಜಪಾನ್‌ನ ಟೆಕ್ನೊ ಪ್ರೊ ತೆಕ್ಕೆಗೆ ರೊಬೊಸಾಫ್ಟ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 13:45 IST
Last Updated 10 ಆಗಸ್ಟ್ 2021, 13:45 IST

ಉಡುಪಿ: ಕರಾವಳಿಯ ಪ್ರಸಿದ್ಧ ರೊಬೊಸಾಫ್ಟ್‌ ಸಾಫ್ಟ್‌ವೇರ್ ಕಂಪೆನಿಯನ್ನು ಜಪಾನ್‌ನ ಟೆಕ್ನೊ ಪ್ರೋ ಗ್ರೂಪ್‌ ಖರೀದಿಸಲು ಮುಂದಾಗಿದೆ. ರೊಬೊಸಾಫ್ಟ್‌ನ ಶೇ 100 ಷೇರನ್ನು ಖರೀದಿಸಲು ಟೆಕ್ನೊ ಪ್ರೊ ಒಪ್ಪಂದ ಮಾಡಿಕೊಂಡಿದೆ.

ಸದ್ಯ ಚಾಲ್ತಿಯಲ್ಲಿರುವ ಆಡಳಿತ ಮಂಡಳಿಯೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲಿದ್ದು, ರವಿತೇಜ ಬೊಮ್ಮಿರೆಡ್ಡಿಪಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ರೊಬೊಸಾಫ್ಟ್‌ ಟೆಕ್ನಾಲಜಿ ಸ್ಪಷ್ಟಪಡಿಸಿದೆ.

ತಂತ್ರಾಂಶ ಅಭಿವೃದ್ಧಿ, ಆ್ಯಪ್‌ಗಳ ನಿರ್ಮಾಣ ಸೇರಿದಂತೆ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸಂಬಂಧಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೊಬೊಸಾಫ್ಟ್‌ 1996ರಲ್ಲಿ ಸ್ಥಾಪನೆಯಾಯಿತು. ಉಡುಪಿಯಲ್ಲಿ ಕೇಂದ್ರ ಕಚೇರಿಯಿದ್ದು, ಬೆಂಗಳೂರು ಹಾಗೂ ಮುಂಬೈನಲ್ಲಿ ಡೆಲಿವರಿ ಕೇಂದ್ರ ಹಾಗೂ ಅಮೆರಿಕಾ, ಜಪಾನ್‌ ಸೇರಿದಂತೆ ಹಲವೆಡೆ ಮಾರಾಟ ಕೇಂದ್ರಗಳನ್ನು ಹೊಂದಿದೆ.

ADVERTISEMENT

2008ರಲ್ಲಿ ಮೊಬೈಲ್‌ ಆ್ಯಪ್‌ಗಳನ್ನು ಸಿದ್ಧಪಡಿಸುವ ಮೂಲಕ ಜಾಗತಿಕವಾಗಿ ಉದ್ಯಮವನ್ನು ವಿಸ್ತರಿಸಿಕೊಂಡ ರೊಬೊಸಾಫ್ಟ್‌ ಕಂಪನಿಯಲ್ಲಿ 1,000ಕ್ಕೂ ಹೆಚ್ಚು ಉದ್ಯೋಗಿಗಳು ದುಡಿಯುತ್ತಿದ್ದಾರೆ.

2 ದಶಕಗಳ ಅವಧಿಯಲ್ಲಿ ಕಂಪೆನಿ ಬಹಳ ಎತ್ತರಕ್ಕೆ ಬೆಳೆದಿದೆ. ಜಾಗತಿಕ ದೈತ್ಯ ಸಂಸ್ಥೆಯಾಗಿರುವ ಟೆಕ್ನೊ ಪ್ರೊ ಭಾಗವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ರೊಬೊಸಾಫ್ಟ್‌ ಸಂಸ್ಥಾಪಕ ಹಾಗೂ ಎಂಡಿ ರೋಹಿತ್ ಭಟ್ ತಿಳಿಸಿದ್ದಾರೆ.

ಡಿಜಿಟಲ್ ರೂಪಾಂತರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಾಡಿರುವ ರೊಬೊಸಾಫ್ಟ್‌ನಲ್ಲಿ ಬಂಡವಾಳ ಹೂಡುತ್ತಿರುವುದಕ್ಕೆ ಹರ್ಷವಾಗಿದೆ. ಕಂಪೆನಿಯ ಬೆಳವಣಿಗೆ, ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಅನುಭವ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಬಳಸಿಕೊಂಡು ಮತ್ತಷ್ಟು ಎತ್ತರಕ್ಕೆ ಬೆಳೆಯುವುದಾಗಿ ಟೆಕ್ನೊ ಪ್ರೊ ಸಿಇಒ ತಾಕೇಶಿ ಯಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.