ADVERTISEMENT

ತೆಲಂಗಾಣ: ಬಿಯರ್‌ ಬೆಲೆ ಶೇ 15ರಷ್ಟು ಏರಿಕೆ

ಪಿಟಿಐ
Published 11 ಫೆಬ್ರುವರಿ 2025, 15:44 IST
Last Updated 11 ಫೆಬ್ರುವರಿ 2025, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ಬಿಯರ್‌ ಬೆಲೆಯನ್ನು ಶೇ 15ರಷ್ಟು ಏರಿಕೆ ಮಾಡಿದೆ.

2019ರಿಂದ ಬಿಯರ್‌ ದರವನ್ನು ಸರ್ಕಾರವು ಪರಿಷ್ಕರಣೆ ಮಾಡಿರಲಿಲ್ಲ.

ಬಿಯರ್‌ ಪೂರೈಕೆಯ ಬಾಕಿ ಮೊತ್ತ ಕೂಡ ಪಾವತಿಸಿಲ್ಲ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಹಾಗಾಗಿ, ತೆಲಂಗಾಣ ಪಾನೀಯ ನಿಗಮಕ್ಕೆ (ಟಿಜಿಬಿಸಿಎಲ್‌) ಬಿಯರ್‌ ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಯುನೈಟೆಡ್‌ ಬ್ರುವರಿಸ್‌ ಕಂಪನಿಯು (ಯುಬಿಎಲ್‌) ಹೇಳಿತ್ತು. ಆದರೆ, ಸರ್ಕಾರದ ಮಧ್ಯಪ್ರವೇಶದಿಂದ ಮತ್ತೆ ಪೂರೈಕೆ ಆರಂಭಿಸಿತ್ತು. 

ADVERTISEMENT

ಬಿಯರ್‌ ದರ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬ್ರುವರಿಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಬಿಎಐ), ಶೀಘ್ರವೇ ಬಾಕಿ ಮೊತ್ತ ಪಾವತಿಸುವಂತೆ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರಿಗೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.