ADVERTISEMENT

2,000 ಉದ್ಯೋಗಿಗಳ ನೇಮಕಕ್ಕೆ ಟೆಸ್ಲಾ ಪವರ್ ಇಂಡಿಯಾ ಯೋಜನೆ

ಪಿಟಿಐ
Published 19 ಫೆಬ್ರುವರಿ 2024, 14:45 IST
Last Updated 19 ಫೆಬ್ರುವರಿ 2024, 14:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಉದ್ಯಮ ವಿಸ್ತರಣೆಯ ಭಾಗವಾಗಿ ತನ್ನ ವಿವಿಧ ಘಟಕಗಳಿಗೆ 2,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಟೆಸ್ಲಾ ಪವರ್ ಇಂಡಿಯಾ ಸೋಮವಾರ ಪ್ರಕಟಿಸಿದೆ.

ಎಂಜಿನಿಯರಿಂಗ್‌, ಕಾರ್ಯಾಚರಣೆ, ಮಾರಾಟ, ಮಾರ್ಕೆಟಿಂಗ್‌ ಮತ್ತು ಇತರ ವಿಭಾಗಗಳಲ್ಲಿ ಉದ್ಯೋಗ ಭರ್ತಿ ಮಾಡಲು ಯುವಕರಿಗೆ ವಿಫುಲವಾದ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ತನ್ನ ನವೀಕರಿಸಬಹುದಾದ ಬ್ಯಾಟರಿ ಬ್ರಾಂಡ್‌ 'ReStore' ಅನ್ನು ಇತ್ತೀಚೆಗೆ ಆರಂಭಿಸಿದ್ದ ಟೆಸ್ಲಾ ಪವರ್ ಇಂಡಿಯಾ, 2026ರ ವೇಳೆಗೆ ದೇಶದಾದ್ಯಂತ 5,000 ಘಟಕಗಳನ್ನು ತೆರೆಯಲು ಯೋಜನೆ ರೂಪಿಸಿದೆ.

'ಭಾರತದಲ್ಲಿ ಹೆಜ್ಜೆಗುರುತು ವಿಸ್ತರಿಸಲು ಮುಂದಾಗಿರುವ ನಾವು, ಸುಸ್ಥಿರ ಗುರಿ ಸಾಧನೆಗೆ ಪ್ರತಿಭಾವಂತರ ನವೀನ ಆಲೋಚನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದನ್ನು ಗುರುತಿಸಿದ್ದೇವೆ. ನಮ್ಮ ತಂಡಕ್ಕೆ ಅವರನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ' ಎಂದು ಟೆಸ್ಲಾ ಪವರ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕವೀಂದರ್‌ ಖುರಾನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.