ADVERTISEMENT

ಬಿಪಿಸಿಎಲ್‌ನಿಂದ ಬಂಡವಾಳ ಹಿಂಪಡೆಯಲು ನಿರ್ಧರಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 5:07 IST
Last Updated 7 ಮಾರ್ಚ್ 2020, 5:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್)ನಲ್ಲಿ ತನಗೆ ಸಂಬಂಧಿಸಿದ ಶೇ.52.98 ಷೇರುಗಳನ್ನು ಮಾರಾಟ ಮಾಡಲು ಭಾರತ ಸರ್ಕಾರ ಶನಿವಾರ ನಿರ್ಧರಿಸಿದೆ.

ಬಿಪಿಸಿಎಲ್‌ ಷೇರು ಕೊಳ್ಳುವ ಆಸಕ್ತಿಯ ಹೊಂದಿದವರನ್ನು ಮೇ.2 ಒಳಗೆ ಆಹ್ವಾನಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಹರಾಜು ದಾಖಲೆಯಲ್ಲಿ ತಿಳಿಸಿದೆ.

ಈ ಮೂಲಕ ಭಾರತ ಸರ್ಕಾರ ಬಿಪಿಸಿಎಲ್‌ನಲ್ಲಿ ಹೂಡಿಕೆ ಮಾಡಿರುವ ₹114.91 ಕೋಟಿ ಮೌಲ್ಯದ ಬಂಡವಾಳವಾಳ ಹಿಂಪಡೆಯಲು ತೀರ್ಮಾನಿಸಿದಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.