ADVERTISEMENT

ಸತತ ಮೂರನೇ ದಿನವೂ ಇಂಧನ ದರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 16:35 IST
Last Updated 2 ಅಕ್ಟೋಬರ್ 2021, 16:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಮೂರನೇ ದಿನವೂ ಇಂಧನ ದರ ಹೆಚ್ಚಿಸಿವೆ. ಶನಿವಾರ ಪೆಟ್ರೋಲ್‌ ದರ ಲೀಟರಿಗೆ 25 ಪೈಸೆ ಮತ್ತು ಡೀಸೆಲ್‌ ದರ 30 ಪೈಸೆ ಏರಿಕೆ ಆಗಿದೆ.

ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 105.38 ಮತ್ತು ಡೀಸೆಲ್‌ ದರವು ಲೀಟರಿಗೆ ₹ 95.61ಕ್ಕೆ ಏರಿಕೆ ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ₹ 102.14ರ ಮಟ್ಟಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ₹ 9.047ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ ₹ 108.19 ಮತ್ತು ಡೀಸೆಲ್‌ ದರ ₹ 98.16ಕ್ಕೆ ಏರಿಕೆ ಆಗಿದೆ.

ADVERTISEMENT

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ಬದಲಾವಣೆ ಆಗಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಮೂರು ವರ್ಷಗಳ ಗರಿಷ್ಠ ಮಟ್ಟದ ಸಮೀಪಕ್ಕೆ ಬಂದಿದ್ದು, ಜಾಗತಿಕ ಉತ್ಪಾದನೆಯಲ್ಲಿ ಅಡಚಣೆ ಆಗಿರುವುದರಿಂದ ಕಂಪನಿಗಳನ್ನು ತಮ್ಮ ಸಂಗ್ರಹದಿಂದ ಹೆಚ್ಚು ಕಚ್ಚಾ ತೈಲವನ್ನು ಹೊರತೆಗೆಯುತ್ತಿವೆ.

ವಾರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ದರ ಹೆಚ್ಚಳ ಮಾಡಿರುವುದರಿಂದ ಪ್ರಮುಖ ನಗರಗಳಲ್ಲಿ ಲೀಟರಿಗೆ ₹ 100ಕ್ಕಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆ ಆಗಿದೆ.

ಡೀಸೆಲ್‌ ದರವು ಒಂಭತ್ತು ದಿನಗಳಲ್ಲಿ ಏಳು ಬಾರಿ ಹೆಚ್ಚಳ ಮಾಡಿದ್ದು ಮಧ್ಯ ಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಲೀಟರಿಗೆ ₹ 100ನ್ನು ದಾಟಿದೆ.

ಅಂಕಿ–ಅಂಶ

ದರ ಹೆಚ್ಚಳ (ಲೀಟರಿಗೆ): ‌₹1.85

ಸೆ. 24 ರಿಂದ ಈವರೆಗೆ ಡೀಸೆಲ್‌ ದರದಲ್ಲಿ ಆಗಿರುವ ಹೆಚ್ಚಳ:₹ 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.