ADVERTISEMENT

ಥಾಮಸ್‌ ಕುಕ್‌ನಿಂದ ಭೂತಾನ್‌ ಪ್ರವಾಸ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 12:55 IST
Last Updated 25 ಜನವರಿ 2024, 12:55 IST
ಭೂತಾನ್‌ ಪ್ರವಾಸ ಪ್ಯಾಕೇಜ್‌ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪನಿಯ ದಕ್ಷಿಣ ವಿಭಾಗದ ಮುಖ್ಯಸ್ಥ ಪ್ರಸೂನ್‌ ಮುದ್ದಪ್ಪ, ಹಾಲಿಡೇಸ್‌ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ರೋಮಿಲ್‌ ಪಂತ್‌, ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಸಂತೋಷ್‌ ಖನ್ನಾ, ಸೀನಿಯರ್‌ ಸೇಲ್ಸ್‌ ಮ್ಯಾನೇಜರ್‌ ಪಾಂಡುರಂಗ ಇದ್ದರು 
ಭೂತಾನ್‌ ಪ್ರವಾಸ ಪ್ಯಾಕೇಜ್‌ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪನಿಯ ದಕ್ಷಿಣ ವಿಭಾಗದ ಮುಖ್ಯಸ್ಥ ಪ್ರಸೂನ್‌ ಮುದ್ದಪ್ಪ, ಹಾಲಿಡೇಸ್‌ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ರೋಮಿಲ್‌ ಪಂತ್‌, ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಸಂತೋಷ್‌ ಖನ್ನಾ, ಸೀನಿಯರ್‌ ಸೇಲ್ಸ್‌ ಮ್ಯಾನೇಜರ್‌ ಪಾಂಡುರಂಗ ಇದ್ದರು    

ಬೆಂಗಳೂರು: ಪ್ರಯಾಣ ಸೇವಾ ಕಂಪನಿ ಥಾಮಸ್‌ ಕುಕ್ ಇಂಡಿಯಾ,  ಭೂತಾನ್‌ನ ಪ್ರವಾಸಿ ತಾಣಗಳ ವೀಕ್ಷಣೆಗೆ ಬೆಂಗಳೂರಿನಿಂದ ನೇರವಾಗಿ ಐದು ವಿಶೇಷ ಚಾರ್ಟರ್‌ ವಿಮಾನ ಸೇವೆಯನ್ನು ಏಪ್ರಿಲ್‌ 27ರಿಂದ ಆರಂಭಿಸಲಿದೆ. 

ಪ್ರತಿ 8 ದಿನಕ್ಕೆ ಒಂದು ವಿಮಾನವು ಬೆಂಗಳೂರಿನಿಂದ ಹೊರಡಲಿದೆ. ಒಟ್ಟು ಎಂಟು ದಿನಗಳ ಪ್ರಯಾಣದ ಪ್ಯಾಕೇಜ್‌ನಲ್ಲಿ ಭೂತಾನ್‌ನ ಪಾರೋ, ಪುನಾಖಾ ಮತ್ತು ಥಿಂಪುನಲ್ಲಿನ ತಾಣಗಳು, ಟೈಗರ್‌ ನೆಸ್ಟ್‌, ಚೋರ್ಟೆನ್, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಲವು ಪ್ರದೇಶಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಥಾಮಸ್‌ ಕುಕ್‌ ಲಿಮಿಟೆಡ್‌ನ ಹಾಲಿಡೇಸ್‌ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ರೋಮಿಲ್‌ ಪಂತ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಬ್ಬರಿಗೆ ₹92 ಸಾವಿರ ಪ್ರಯಾಣ ದರ ನಿಗದಿಪಡಿಸಲಾಗಿದೆ. ವಿಮಾನದಲ್ಲಿ 126 ಆಸನಗಳು (8 ಬ್ಯುಸಿನೆಸ್‌ ಕ್ಲಾಸ್‌) ಇದ್ದು, ಎಲ್ಲ ದಿನವೂ ಊಟ ಮತ್ತು ವಸತಿ ಕಲ್ಪಿಸಲಾಗುವುದು ಎಂದರು.

ADVERTISEMENT

ಈ ಮೊದಲು ಭೂತಾನ್‌ಗೆ ಬೆಂಗಳೂರಿನಿಂದ ನೇರ ವಿಮಾನ ಸಂಪರ್ಕ ಇರಲಿಲ್ಲ. ಹಾಗಾಗಿ, ಪ್ರವಾಸಿಗರು ದೆಹಲಿ ಅಥವಾ ಕೋಲ್ಕತ್ತ ಮೂಲಕ ಪ್ರಯಾಣಿಸಬೇಕಿತ್ತು. ಇದರಿಂದ ಪ್ರಯಾಣದ ಸಮಯ ಮತ್ತು ಖರ್ಚು ಹೆಚ್ಚಾಗುತ್ತಿತ್ತು. ಇದನ್ನು ಮನಗಂಡು ನೇರವಾಗಿ ಸಂಪರ್ಕ ಕಲ್ಪಿಸಲಾಗಿದೆ. ಈಗ ಮೂರೂವರೆ ಗಂಟೆಯಲ್ಲೇ ಭೂತಾನ್‌ಗೆ ತಲುಪಬಹುದು ಎಂದು ತಿಳಿಸಿದರು.

ಪ್ರಯಾಣಿಕರ ಜೊತೆ ಕನ್ನಡ ಭಾಷೆಯಲ್ಲಿ ಮಾತನಾಡುವ ಕಂಪನಿಯ ಸಿಬ್ಬಂದಿ ಇರಲಿದ್ದಾರೆ. ಪ್ರಯಾಣಿಕರು ಕಂಪನಿಯ ವೆಬ್‌ಸೈಟ್‌, ಟ್ರಾವೆಲ್‌ ಏಜೆನ್ಸಿ ಬಳಿ ಟಿಕೆಟ್‌ ಖರೀದಿಸಬಹುದಾಗಿದೆ ಎಂದರು. 

ಅಯೋಧ್ಯೆಗೆ ಪ್ರವಾಸ:

ರಾಮ ಮಂದಿರದ ಉದ್ಘಾಟನೆಯಾಗಿರುವುದರಿಂದ ‘ಚಲೋ ಅಯೋಧ್ಯೆ’ ಎಂಬ ಮೂರು ದಿನಗಳ ಪ್ರವಾಸಿ ಪ್ಯಾಕೇಜ್‌ ಕೂಡ ಆರಂಭಿಸಲಾಗಿದೆ. ಈ ಪ್ರವಾಸದಲ್ಲಿ ಅಯೋಧ್ಯೆಯಲ್ಲಿನ ಧಾರ್ಮಿಕ ಸ್ಥಳಗಳನ್ನು ವೀಕ್ಷಣೆ ಮಾಡಿಸಲಾಗುತ್ತದೆ. ಇದರ ಪ್ಯಾಕೇಜ್‌ ₹24,700ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿಯ ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಸಂತೋಷ್‌ ಖನ್ನಾ ಹೇಳಿದರು.

ಅನಂತ ಕಾಶಿ ಅಯೋಧ್ಯೆ ಯಾತ್ರಾ:

ಈ ಯಾತ್ರೆಯು ಜನವರಿ 28ರಿಂದ ಆರಂಭವಾಗಲಿದ್ದು, 6 ದಿನಗಳ ಪ್ರವಾಸ ಇದಾಗಿದೆ. ಈ ಪ್ಯಾಕೇಜ್‌ ₹34,100ರಿಂದ ಆರಂಭ ಆಗಲಿದೆ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.