ಬೆಂಗಳೂರು: ಪ್ರವಾಸ ಸೇವಾ ಕಂಪನಿ ಥಾಮಸ್ ಕುಕ್ ಇಂಡಿಯಾ, ಸೆಪ್ಟೆಂಬರ್ 14ರಂದು ನಗರದ
ಶೆರಟನ್ ಗ್ರ್ಯಾಂಡ್ ಹೋಟೆಲ್ (ಓರಾಯನ್ ಮಾಲ್ ಹತ್ತಿರ) ಮತ್ತು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲಿ ‘ಗ್ರ್ಯಾಂಡ್ ಹಾಲಿಡೇ ಕಾರ್ನಿವಲ್’ ಆಯೋಜಿಸಿದೆ.
ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ಸೌಲಭ್ಯಗಳು ದೊರೆಯಲಿವೆ ಎಂದು ಕಂಪನಿ ಹೇಳಿದೆ. ‘ಆಸ್ಟ್ರೇಲಿಯಾ ಮತ್ತು ಆಗ್ನೇಯ ಏಷ್ಯಾ ಪ್ರವಾಸ ಕೈಗೊಳ್ಳುವವರು ಮುಂಗಡವಾಗಿ ಬುಕ್ಕಿಂಗ್ ಮಾಡಿದರೆ ಕ್ರೂಸ್ ಹಾಲಿಡೇಸ್ ಉಚಿತವಾಗಿ ದೊರೆಯಲಿದೆ. ಸ್ಪಾಟ್ ಬುಕ್ಕಿಂಗ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ನೀಡಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಪ್ರವಾಸ ವ್ಯವಸ್ಥಾಪಕರಾದ ಅಶೋಕ್ ಸೋಮಯಾಜಿ (9964027269) ಹಾಗೂ ಪಾಂಡುರಂಗ ಜಿ.ಎಮ್ (9620999066) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.