ADVERTISEMENT

ಬಿಒಬಿಯಲ್ಲಿ ಮೂರು ಬ್ಯಾಂಕ್‌ ವಿಲೀನ : ಏ.1 ರಿಂದ ಜಾರಿ

ಪಿಟಿಐ
Published 22 ಫೆಬ್ರುವರಿ 2019, 20:00 IST
Last Updated 22 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದಲ್ಲಿ (ಬಿಒಬಿ), ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ವಿಲೀನವು ಇದೇ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಪ್ರಕ್ರಿಯೆ ಏ. 1 ರಿಂದ ಜಾರಿಗೆ ಬರಲಿದೆ. ತನ್ನ ಷೇರುಗಳನ್ನು ವಿಜಯ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ಗಳ ಷೇರುದಾರರಿಗೆ ನೀಡಲು ಮಾರ್ಚ್‌ 11ರ ದಿನ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ತಿಳಿಸಿದೆ.

ವಿಲೀನ ಸೂತ್ರಗಳ ಅನ್ವಯ, ವಿಜಯ ಬ್ಯಾಂಕ್‌ನ ಷೇರುದಾರರು ತಮ್ಮ ಬಳಿ ಇರುವ ಪ್ರತಿ 1 ಸಾವಿರ ಷೇರುಗಳಿಗೆ ಪ್ರತಿಯಾಗಿ ಬಿಒಬಿಯ 402 ಷೇರು ಮತ್ತು ದೇನಾ ಬ್ಯಾಂಕ್‌ ಷೇರುದಾರರು ಪ್ರತಿ 1 ಸಾವಿರ ಷೇರುಗಳಿಗೆ ಪ್ರತಿಯಾಗಿ ಬಿಒಬಿಯ 110 ಷೇರು ಪಡೆಯಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.