ADVERTISEMENT

ಮುಂಬೈ ಮೆಟ್ರೊಗೆ 108 ಬೋಗಿ ಸರಬರಾಜು: ₹ 1,600 ಕೋಟಿ ಒಪ್ಪಂದ ಮಾಡಿಕೊಂಡ TRSL

ಪಿಟಿಐ
Published 4 ಆಗಸ್ಟ್ 2025, 14:54 IST
Last Updated 4 ಆಗಸ್ಟ್ 2025, 14:54 IST
<div class="paragraphs"><p>ಮುಂಬೈ ಮೆಟ್ರೊ</p></div>

ಮುಂಬೈ ಮೆಟ್ರೊ

   

ಪಿಟಿಐ ಚಿತ್ರ

ಕೋಲ್ಕತ್ತ: ಮುಂಬೈ ಮೆಟ್ರೊಗೆ 108 ಬೋಗಿಗಳನ್ನು ತಯಾರಿಸಿ, ಸರಬರಾಜು ಮಾಡಲು 'ತಿತಗಢ ರೈಲ್ ಸಿಸ್ಟಮ್ಸ್‌ ಲಿಮಿಟೆಡ್‌' (TRSL) ₹ 1,598.55 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ADVERTISEMENT

ಮುಂಬೈ ಮೆಟ್ರೊ ಲೈನ್‌–6ಗಾಗಿ ಬೋಗಿಗಳ ವಿನ್ಯಾಸ, ತಯಾರಿಕೆ, ಪೂರೈಕೆ ಮತ್ತು ಏಕೀಕರಣ, ಪರೀಕ್ಷೆ ಮತ್ತು ಕಾರ್ಯಾಚರಣೆ ನಡೆಸುವುದಕ್ಕೆ ಸಂಬಂಧಿಸಿದಂತೆ TRSL ಸ್ವೀಕಾರ ಪತ್ರವನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿ ಬೋಗಿ ತಯಾರಿಕೆಗೆ ಸರಾಸರಿ ₹ 10–11 ಕೋಟಿ ವೆಚ್ಚವಾಗಲಿದೆ ಎಂದೂ ಹೇಳಿದ್ದಾರೆ.

ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ಯೋಜನೆ ಕಾರ್ಯಗತಗೊಳಿಸುತ್ತಿರುವ NCC ಲಿಮಿಟೆಡ್, ಈ ಒಪ್ಪಂದವನ್ನು TRSLಗೆ ನೀಡಿದೆ.

ಈ ಒಪ್ಪಂದವು ಭಾರತೀಯ ನಗರ ಸಾರಿಗೆ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿಕೊಂಡಿರುವ TRSLನ ತಯಾರಿಕಾ ಘಟಕವು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಉತ್ತರ್ಪರಾದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.