ಹುಣಸೂರು: ರಾಜ್ಯದಲ್ಲಿ 2020–21ನೇ ಸಾಲಿನಲ್ಲಿ 88 ದಶಲಕ್ಷ ಕೆ.ಜಿ ತಂಬಾಕು ಬೆಳೆಯಲು ತಂಬಾಕು ಮಂಡಳಿಯು ರೈತರಿಗೆ ಅನುಮತಿ ನೀಡಿದೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಮಂಡಳಿ ಅಧ್ಯಕ್ಷ ವೈ.ರಘುನಾಥ ಬಾಬು ನೇತೃತ್ವದಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಫೆಬ್ರುವರಿ 28ರಂದು ನಡೆದ ಸಭೆಯಲ್ಲಿ ರಾಜ್ಯಕ್ಕೆ 99 ದಶಲಕ್ಷ ಕೆ.ಜಿ ತಂಬಾಕು ಬೆಳೆಗೆ ಅನುಮತಿ ನೀಡಲಾಗಿತ್ತು. ತಂಬಾಕನ್ನು ಹೆಚ್ಚಾಗಿ ಖರೀದಿಸುವ ಯೂರೋಪ್ ದೇಶಗಳು ಕೊರೊನಾ ವೈರಸ್‌ನಿಂದ ತತ್ತರಿಸಿವೆ. ಭವಿಷ್ಯದಲ್ಲಿ ರಾಜ್ಯದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಾರದು ಎಂಬ ದೃಷ್ಟಿಯಿಂದ 99 ದಶಲಕ್ಷ ಕೆ.ಜಿಯಿಂದ 88 ದಶಲಕ್ಷ ಕೆ.ಜಿಗೆ ಇಳಿಕೆ ಮಾಡಲಾಗಿದೆ. ಸಭೆಯಲ್ಲಿ ಮಂಡಳಿ ಅಧ್ಯಕ್ಷೆ ಕೆ.ಸುನಿತಾ, ಕಾರ್ಯಕಾರಣಿ ಮಂಡಳಿ ನಿರ್ದೇಶಕ ಎ.ಶ್ರೀಧರ್ ಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.