ನವದೆಹಲಿ: ಫ್ರಾನ್ಸ್‌ನ ತೈಲ ಮತ್ತು ಇಂಧನ ಕಂಪನಿ ‘ಟೋಟಲ್’, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ಕಂಪನಿಯಲ್ಲಿನ ಶೇಕಡ 20ರಷ್ಟು ಷೇರುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಸರಿಸುಮಾರು ₹18 ಸಾವಿರ ಕೋಟಿ ಮೊತ್ತದ ಒಪ್ಪಂದ ಇದು. ಅದಾನಿ ಗ್ರೀನ್ ಎನರ್ಜಿಯಲ್ಲಿನ ಪ್ರವರ್ತಕರ ಪಾಲು ಹಾಗೂ ಸೌರ ವಿದ್ಯುತ್ ಉತ್ಪಾದನಾ ವಿಭಾಗದಲ್ಲಿನ ಕೆಲವು ಆಸ್ತಿಗಳನ್ನು ‘ಟೋಟಲ್’ ಖರೀದಿಸಲಿದೆ.
ಅದಾನಿ ಗ್ರೀನ್ ಎನರ್ಜಿ ಕಂಪನಿಯ ಈಗಿನ ಮಾರುಕಟ್ಟೆ ಮೌಲ್ಯವು ₹1.49 ಲಕ್ಷ ಕೋಟಿ. ಇದರಲ್ಲಿ ಶೇಕಡ 20ರಷ್ಟು ಷೇರುಗಳ ಮೌಲ್ಯವು ₹30 ಸಾವಿರ ಕೋಟಿ ಆಗುತ್ತದೆ. ಆದರೆ, ಟೋಟಲ್ ಕಂಪನಿಗೆ ಕಡಿಮೆ ಮೌಲ್ಯಕ್ಕೆ ಷೇರುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಟೋಟಲ್ ಕಂಪನಿಯು ಷೇರುಗಳಿಗಾಗಿ ₹14,600 ಕೋಟಿ ಹಾಗೂ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯಲ್ಲಿನ ಪಾಲು ಖರೀದಿಗೆ ₹3,600 ಕೋಟಿ ಪಾವತಿಸಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.