ADVERTISEMENT

ದೇಶದಲ್ಲಿ ಅರ್ಬನ್‌ ಕ್ರೂಸರ್ ಮಾರಾಟ ಸ್ಥಗಿತ

ಪಿಟಿಐ
Published 11 ನವೆಂಬರ್ 2022, 16:34 IST
Last Updated 11 ನವೆಂಬರ್ 2022, 16:34 IST
   

ನವದೆಹಲಿ: ಟೊಯೋಟ ಕಿರ್ಲೋಸ್ಕರ್ ಮೋಟರ್‌ ಕಂಪನಿಯು ದೇಶದಲ್ಲಿ ಅರ್ಬನ್‌ ಕ್ರೂಸರ್‌ ಕಾಂಪ್ಯಾಕ್ಟ್‌ ಎಸ್‌ಯುವಿ ಮಾರಾಟ ಸ್ಥಗಿತಗೊಳಿಸಿರುವುದಾಗಿ ಶುಕ್ರವಾರ ತಿಳಿಸಿದೆ.

ಗ್ರಾಹಕರ ಅನುಭವವನ್ನು ಇನ್ನಷ್ಟು ಉತ್ತಮಪಡಿಸಲು ಮತ್ತು ಮಾದರಿಗಳ ಬಗ್ಗೆ ಗ್ರಾಹಕರು ನೀಡಿರುವ ಪ್ರತಿಕ್ರಿಯೆಯ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಜಾ ಮಾದರಿಯನ್ನು2020ರ ಸೆಪ್ಟೆಂಬರ್‌ನಲ್ಲಿ ಅರ್ಬನ್ ಕ್ರೂಸರ್‌ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಈವರೆಗೆ ದೇಶದಲ್ಲಿ ಒಟ್ಟು 65 ಸಾವಿರ ‘ಅರ್ಬನ್ ಕ್ರೂಸರ್’ ವಾಹನಗಳು ಮಾರಾಟ ಆಗಿವೆ.

ADVERTISEMENT

ಎರಡು ಮತ್ತು ಮೂರನೇ ಶ್ರೇಣಿಯ ಮಾರುಕಟ್ಟೆಗಳಲ್ಲಿ ಮೊದಲ ಬಾರಿಗೆ ಟೊಯೋಟ ವಾಹನ ಖರೀದಿಸುವಂತೆ ಮಾಡುವಲ್ಲಿ ಈ ಮಾದರಿಯು ಪ್ರಮುಖ ಪಾತ್ರ ವಹಿಸಿತ್ತು. ಈ ಮೂಲಕ ಹೊಸ ಗ್ರಾಹಕರನ್ನು ತಲುಪುವ ಕಂಪನಿಯ ಪ್ರಯತ್ನಕ್ಕೆ ಉತ್ತೇಜನ ದೊರೆತಿತ್ತು ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.