ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟೊಯೊಟ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ತನ್ನ ಆಯ್ದ ಶ್ರೇಣಿಯ ಕಾರುಗಳ ಬೆಲೆಯನ್ನು ಶೇ 1ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಏಪ್ರಿಲ್ 1ರಿಂದ ಈ ಬೆಲೆ ಹೆಚ್ಚಳ ಜಾರಿಗೆ ಬರಲಿದೆ.
‘ತಯಾರಿಕಾ ವೆಚ್ಚದ ಏರಿಕೆ ಹಾಗೂ ಕಾರ್ಯಾಚರಣೆಯ ಖರ್ಚನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.
ಟೊಯೊಟದ ಹ್ಯಾಚ್‌ಬ್ಯಾಕ್ ಕಾರು ‘ಗ್ಲಾನ್ಸಾ’ದ ಎಕ್ಸ್ ಷೋರೂಂ ಬೆಲೆಯು ₹6.86 ಲಕ್ಷ ಇದ್ದರೆ, ಎಸ್‌ಯುವಿ ಫಾರ್ಚುನರ್ ಕಾರಿನ ಎಕ್ಸ್ ಷೋರೂಂ ಬೆಲೆಯು ₹51.44 ಲಕ್ಷ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.