ADVERTISEMENT

ಪಿಂಚಣಿ: ವಿಶೇಷ ಸಭೆಗೆ ಕಾರ್ಮಿಕ ಸಂಘಗಳ ಒತ್ತಾಯ

ಪಿಟಿಐ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST

ನವದೆಹಲಿ: ಪಿಂಚಣಿ ಯೋಜನೆಗೆ (ಇಪಿಎಸ್‌) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಶೀಘ್ರವೇ ಅನುಷ್ಠಾನಕ್ಕೆ ತರುವ ಕುರಿತು ಚರ್ಚಿಸಲು ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿಯ ವಿಶೇಷ ಸಭೆ ಕರೆಯುವಂತೆ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

‘ತಿಂಗಳ ಪಿಂಚಣಿ ಮೊತ್ತವು ಕನಿಷ್ಠ ₹ 5 ಸಾವಿರ ಇರಬೇಕು ಎನ್ನುವುದು ನನ್ನ ಬೇಡಿಕೆ’ ಎಂದು ಭಾರತೀಯ ಮಜ್ದೂರ್‌ ಸಂಘದ (ಬಿಎಂಎಸ್‌) ಕಾರ್ಯಕರ್ತ ಮತ್ತು ಇಪಿಎಫ್‌ಒ ಟ್ರಸ್ಟಿ ಪ್ರಭಾಕರ್‌ ಭಾಣಾಸುರೆ ಹೇಳಿದ್ದಾರೆ.

ಇಪಿಎಸ್‌ಗೆ 2014ರಲ್ಲಿ ತಂದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.