ADVERTISEMENT

Gold And Silver Price | ಚಿನ್ನದ ಬೆಲೆ ₹3,600 ಏರಿಕೆ: ಬೆಳ್ಳಿಯೂ ದುಬಾರಿ

ಪಿಟಿಐ
Published 7 ಆಗಸ್ಟ್ 2025, 13:07 IST
Last Updated 7 ಆಗಸ್ಟ್ 2025, 13:07 IST
<div class="paragraphs"><p>ಚಿನ್ನ, ಬೆಳ್ಳಿ </p></div>

ಚಿನ್ನ, ಬೆಳ್ಳಿ

   

ನವದೆಹಲಿ: ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ ₹3,600 ಏರಿಕೆಯಾಗಿದ್ದು 10 ಗ್ರಾಂ ಶುದ್ಧ ಚಿನ್ನದ ( ಶೇ 99.9) ದರ ₹1,02,620 ಆಗಿದೆ.

ಈ ಮೂಲಕ ಹಳದಿ ಲೋಹ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ADVERTISEMENT

ಅಖಿಲ ಭಾರತ ಸರಾಫ್ ಅಸೋಸಿಯೇಷನ್‌ ಪ್ರಕಾರ, ಬುಧವಾರ ಶುದ್ಧ ಚಿನ್ನ (ಶೇ 99.9) 10 ಗ್ರಾಂಗೆ ₹99,020 ಅಂತ್ಯವಾಗಿತ್ತು.

ಗುರುವಾರ ಆಭರಣ ಚಿನ್ನದ (ಶೇ 99.5) ಬೆಲೆಯೂ ₹3,600 ಏರಿಕೆಯಾಗಿ 10 ಗ್ರಾಂಗೆ ₹1,02,200 ತಲುಪಿದೆ. ಬುಧವಾರ ಆಭರಣ ಚಿನ್ನ 10 ಗ್ರಾಂಗೆ ₹98,600ಗೆ ತಲುಪಿ ವಹಿವಾಟು ಅಂತ್ಯ ಕಂಡಿತ್ತು.

ಬೆಳ್ಳಿ ಬೆಲೆ ಕೂಡ ₹1,500 ಏರಿಕೆಯಾಗಿದ್ದು, ಕೆ.ಜಿ ಬೆಳ್ಳಿ ಬೆಲೆ ₹1,14,000 ತಲುಪಿದೆ. ಬುಧವಾರ ಬೆಳ್ಳಿ ಬೆಲೆ ಕೆ.ಜಿಗೆ ₹1,12,500 ಇತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಸರಕುಗಳ ಮೇಲೆ ಹೆಚ್ಚುವರಿ ಶೇ 25ರಷ್ಟು ಸುಂಕದ ವಿಧಿಸಿ ಆದೇಶಿಸಿದ್ದೇ ಹಳದಿ ಲೋಹದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.