ADVERTISEMENT

TVS Credit Profit: ಟಿವಿಎಸ್‌ ಕ್ರೆಡಿಟ್‌ ಲಾಭ ಶೇ 13ರಷ್ಟು ಏರಿಕೆ

ಪಿಟಿಐ
Published 30 ಜನವರಿ 2026, 13:36 IST
Last Updated 30 ಜನವರಿ 2026, 13:36 IST
ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಿಮಿಟೆಡ್‌
ಟಿವಿಎಸ್‌ ಕ್ರೆಡಿಟ್‌ ಸರ್ವಿಸಸ್‌ ಲಿಮಿಟೆಡ್‌   

ಬೆಂಗಳೂರು: ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಟಿವಿಎಸ್‌ ಕ್ರೆಡಿಟ್‌ ಡಿಸೆಂಬರ್ ತ್ರೈಮಾಸಿಕದಲ್ಲಿ ₹272 ಕೋಟಿ ಲಾಭ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚು.

ಕಂಪನಿಯ ಒಟ್ಟು ವರಮಾನವು ₹1,870 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ವರಮಾನಕ್ಕೆ ಹೋಲಿಸಿದರೆ ಶೇ 9ರಷ್ಟು ಜಾಸ್ತಿ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯ ಸಾಲ ನೀಡಿಕೆ ಪ್ರಮಾಣವು ಬೆಳವಣಿಗೆ ಕಂಡಿದೆ. ಜಿಎಸ್‌ಟಿ ದರ ಪರಿಷ್ಕರಣೆಯ ನಂತರದಲ್ಲಿ, ಹಣದುಬ್ಬರ ಪ್ರಮಾಣ ಕಡಿಮೆ ಇರುವ ಕಾರಣದಿಂದಾಗಿ ಗ್ರಾಹಕರ ಕಡೆಯಿಂದ ಸ್ಪಂದನ ಜಾಸ್ತಿ ಆಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕಂಪನಿಯ ಪಾಲು ಜಾಸ್ತಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಡಿಸೆಂಬರ್‌ 31ಕ್ಕೆ ಕೊನೆಗೊಂಡ ಒಂಬತ್ತು ತಿಂಗಳ ಅವಧಿಯಲ್ಲಿ ಹೊಸದಾಗಿ 41 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸಾಲ ನೀಡಲಾಗಿದೆ. ಈ ಮೂಲಕ ಕಂಪನಿಯ ಗ್ರಾಹಕರ ಸಂಖ್ಯೆಯು 2.3 ಕೋಟಿ ಆಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.