ADVERTISEMENT

ಟಿವಿಎಸ್‌ನಿಂದ ಎನ್‌ಟಿಒಆರ್‌ಕ್ಯು 150 ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 15:51 IST
Last Updated 17 ಸೆಪ್ಟೆಂಬರ್ 2025, 15:51 IST
   

ಬೆಂಗಳೂರು: ದೇಶದ ಅತ್ಯಂತ ವೇಗದ ಮತ್ತು ಮೊದಲ ಹೈಪರ್ ಸ್ಪೋರ್ಟ್ ಸ್ಕೂಟರ್ ಟಿವಿಎಸ್‌ ಎನ್‌ಟಿಒಆರ್‌ಕ್ಯು 150 ಅನ್ನು ಟಿವಿಎಸ್‌ ಮೋಟರ್‌ ಕಂಪನಿ ಬಿಡುಗಡೆ ಮಾಡಿದೆ. ಈ ದ್ವಿಚಕ್ರ ವಾಹನ 6.3 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 

149.7 ಸಿಸಿ ರೇಸ್-ಟ್ಯೂನ್ಸ್ ಎಂಜಿನ್‌ನಿಂದ ನಡೆಸಲ್ಪಡುವ ಮತ್ತು ಸ್ಟೈಲ್‌ ಏರ್‌ಕ್ರಾಫ್ಟ್ ವಿನ್ಯಾಸದಿಂದ ಪ್ರೇರಿತವಾದ ಈ ಸ್ಕೂಟರ್‌ಅನ್ನು ಹೊಸ ಪೀಳಿಗೆಯ ಸವಾರರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ವಿಶೇಷ ಪರಿಚಯಾತ್ಮಕ ಬೆಲೆ ₹1.19 ಲಕ್ಷ (ಎಕ್ಸ್-ಷೋರೂಂ) ಆಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಲೆಕ್ಸಾ ಇಂಟಿಗ್ರೇಷನ್, ಸ್ಮಾರ್ಟ್‌ವಾಚ್ ಇಂಟಿಗ್ರೇಷನ್, ಲೈವ್‌ ಟ್ರ್ಯಾಕಿಂಗ್‌ ಸೇರಿ ಹಲವಾರು ವೈಶಿಷ್ಟ್ಯಗಳಿವೆ. ಈ ದ್ವಿಚಕ್ರ ವಾಹನ ಎರಡು ರೂಪಾಂತರಗಳಲ್ಲಿ ಇರಲಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.