ADVERTISEMENT

ಏಪ್ರಿಲ್‌–ಜೂನ್‌ ಅವಧಿ: ನಿರುದ್ಯೋಗ ಪ್ರಮಾಣ ಇಳಿಕೆ

ಪಿಟಿಐ
Published 14 ಮಾರ್ಚ್ 2022, 16:22 IST
Last Updated 14 ಮಾರ್ಚ್ 2022, 16:22 IST
   

ನವದೆಹಲಿ (ಪಿಟಿಐ): 2021ರ ಏಪ್ರಿಲ್‌–ಜೂನ್‌ ಅವಧಿಯಲ್ಲಿ ದೇಶದ ನಗರ ಪ್ರದೇಶಗಳಲ್ಲಿ 15 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ನಿರುದ್ಯೋಗ ಪ್ರಮಾಣವು ಶೇಕಡ 12.6ಕ್ಕೆ ಇಳಿಕೆಯಾಗಿದೆ. ಇದು 2020ರ ಏಪ್ರಿಲ್–ಜೂನ್ ಅವಧಿಯಲ್ಲಿ ಶೇ 20.8ರಷ್ಟು ಇತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಕಾರ್ಮಿಕ ಸಮೀಕ್ಷೆಯು ಹೇಳಿದೆ.

2020ರ ಏಪ್ರಿಲ್‌–ಜೂನ್ ಅವಧಿಯಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣವು ದೊಡ್ಡ ಮಟ್ಟದಲ್ಲಿತ್ತು. 2021ರ ಜನವರಿಯಿಂದ ಮಾರ್ಚ್ ನಡುವಿನ ಅವಧಿಯಲ್ಲಿ ನಿರುದ್ಯೋಗ ಪ್ರಮಾಣವು ಶೇ 9.3ರಷ್ಟು ಆಗಿತ್ತು.

2021ರ ಏಪ್ರಿಲ್‌–ಜೂನ್ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿನ ಮಹಿಳೆಯರ ನಿರುದ್ಯೋಗ ಪ್ರಮಾಣವು ಶೇ 14.3ಕ್ಕೆ ಇಳಿಕೆಯಾಗಿದೆ. 2020ರ ಏಪ್ರಿಲ್–ಜೂನ್ ಅವಧಿಯಲ್ಲಿ ಅದು ಶೇ 21.1ರಷ್ಟು ಇತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.