ನಿರುದ್ಯೋಗ
ನವದೆಹಲಿ: ಮೇ ತಿಂಗಳಲ್ಲಿ ದೇಶದಲ್ಲಿನ ನಿರುದ್ಯೋಗ ಪ್ರಮಾಣವು ಶೇಕಡ 5.6ಕ್ಕೆ ಹೆಚ್ಚಳ ಕಂಡಿದೆ. ಇದು ಏಪ್ರಿಲ್‌ನಲ್ಲಿ ಶೇ 5.1ರಷ್ಟು ಇತ್ತು.
15ರಿಂದ 29 ವರ್ಷ ವಯಸ್ಸಿನ ನಡುವಿನವರಲ್ಲಿ ನಿರುದ್ಯೋಗ ಪ್ರಮಾಣವು ಮೇ ತಿಂಗಳಲ್ಲಿ ಶೇ 15ರಷ್ಟಾಗಿದೆ. ಇದು ಏಪ್ರಿಲ್‌ನಲ್ಲಿ ಶೇ 13.8ರಷ್ಟು ಮಾತ್ರ ಇತ್ತು.
ಈ ವಯಸ್ಸಿನ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣವು ಮೇ ತಿಂಗಳಲ್ಲಿ ಶೇ 16.3ರಷ್ಟು ಆಗಿದೆ. ಇದು ಏಪ್ರಿಲ್‌ನಲ್ಲಿ ಶೇ 14.4ರಷ್ಟು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.