ADVERTISEMENT

ಕೇಂದ್ರದ ಬಜೆಟ್ ಹೊಸ ಭರವಸೆಗಳೊಂದಿಗೆ ಸಾರ್ವಜನಿಕರನ್ನು ಓಲೈಸುವ ತಂತ್ರ: ಮಾಯಾವತಿ

ಪಿಟಿಐ
Published 1 ಫೆಬ್ರುವರಿ 2022, 12:40 IST
Last Updated 1 ಫೆಬ್ರುವರಿ 2022, 12:40 IST
ಮಾಯಾವತಿ
ಮಾಯಾವತಿ   

ಲಖನೌ: ಕೇಂದ್ರದ ಬಜೆಟ್ ಅನ್ನು ಟೀಕಿಸಿರುವ ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ, 'ಹೊಸ ಭರವಸೆಗಳೊಂದಿಗೆ ಸಾರ್ವಜನಿಕರನ್ನು ಓಲೈಸುವ ತಂತ್ರ' ಮತ್ತು ಕೇಂದ್ರವು ತನ್ನ ಹಳೆಯ ಘೋಷಣೆಗಳನ್ನು ಜಾರಿಗೆ ತರಲು ಮರೆತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.

ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, 'ಇಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ ಕೇವಲ ಹೊಸ ಭರವಸೆಗಳೊಂದಿಗೆ ಸಾರ್ವಜನಿಕರನ್ನು ಓಲೈಸಲು ಘೋಷಿಸಲಾಗಿದೆ. ಆದರೆ, ಹಿಂದೆ ನೀಡಿದ್ದ ಭರವಸೆಗಳು ಮತ್ತು ಹಳೆಯ ಘೋಷಣೆಗಳ ಅನುಷ್ಠಾನವನ್ನು ಮರೆಯಲಾಗಿದೆ. ಇದು ಎಷ್ಟು ಸೂಕ್ತ? ಬಡತನ, ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಆತ್ಮಹತ್ಯೆಗಳ ಚಿಂತೆಯಿಂದ ಕೇಂದ್ರ ಏಕೆ ಮುಕ್ತವಾಗಿದೆ' ಎಂದು ಪ್ರಶ್ನಿಸಿದ್ದಾರೆ.

'ಕೇಂದ್ರ ಸರಕಾರ ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುತ್ತಿದೆ. ತೆರಿಗೆ ಹೊರೆಯಿಂದ ಜನಜೀವನ ದುಸ್ತರವಾಗಿದೆ. ಹಣದುಬ್ಬರ ಮತ್ತು ಅಭದ್ರತೆಯಿಂದ ಜನರಲ್ಲಿರುವ ಹತಾಶೆ ಮತ್ತು ನಿರಾಶೆಯನ್ನು ಕಡಿಮೆ ಮಾಡಲು ಕೇಂದ್ರವು ಪ್ರಯತ್ನ ನಡೆಸಿದರೆ ಒಳ್ಳೆಯದು' ಎಂದು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ₹ 39.45 ಲಕ್ಷ ಕೋಟಿ ಗಾತ್ರದ ದೊಡ್ಡ ಬಜೆಟ್ ಅನ್ನು ಮಂಡಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.