ADVERTISEMENT

200 ಎಂಜಿನಿಯರಿಂಗ್ ಹುದ್ದೆ ಕಡಿತಗೊಳಿಸಲಿರುವ ಓಲಾ

ರಾಯಿಟರ್ಸ್
Published 19 ಸೆಪ್ಟೆಂಬರ್ 2022, 15:29 IST
Last Updated 19 ಸೆಪ್ಟೆಂಬರ್ 2022, 15:29 IST
   

ಬೆಂಗಳೂರು: ಉದ್ಯೋಗಗಳ ಸಂಖ್ಯೆಯು ಅಗತ್ಯಕ್ಕಿಂತ ಹೆಚ್ಚಾಗುವುದನ್ನು ನಿಯಂತ್ರಿಸಲು ಓಲಾ ಕಂಪನಿಯು ಒಟ್ಟು 200 ಎಂಜಿನಿಯರಿಂಗ್ ಹುದ್ದೆಗಳನ್ನು ಕಡಿಮೆ ಮಾಡಲಿದೆ.

ಪ್ರಸ್ತುತವಾಗಿರುವ ಹುದ್ದೆಗಳನ್ನು ಇನ್ನಷ್ಟು ಬಲಪಡಿಸಲು ತನ್ನ ಕಾರ್ಯಾಚರಣೆಗಳನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ದ್ವಿಚಕ್ರ ವಾಹನಗಳು ಹಾಗೂ ನಾಲ್ಕು ಚಕ್ರದ ವಾಹನಗಳ ಕ್ಷೇತ್ರದಲ್ಲಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕಾಗಿ ಎಂಜಿನಿಯರ್‌ಗಳ ಸಂಖ್ಯೆಯನ್ನು ಮುಂದಿನ 18 ತಿಂಗಳಲ್ಲಿ ಈಗಿನ 2,000ದಿಂದ 5,000ಕ್ಕೆ ಹೆಚ್ಚಿಸುವ ಉದ್ದದೇಶ ಹೊಂದಿದೆ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.