ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ ನಡೆದ ವಹಿವಾಟು 2 ಸಾವಿರ ಕೋಟಿ ದಾಟಿದೆ. ಇದರ ಮೌಲ್ಯ ₹24.85 ಲಕ್ಷ ಕೋಟಿ ಆಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ತಿಳಿಸಿದೆ.
ಆಗಸ್ಟ್‌ನಲ್ಲಿ ಸರಾಸರಿ ಪ್ರತಿನಿತ್ಯ ಅಂದಾಜು 64.5 ಕೋಟಿ ವಹಿವಾಟು ನಡೆದಿದೆ. ಇದರ ಮೌಲ್ಯ ₹80,177 ಕೋಟಿಯಾಗಿದೆ ಎಂದು ತಿಳಿಸಿದೆ.
ಜುಲೈ ತಿಂಗಳಿನಲ್ಲಿ 1,947 ಕೋಟಿ ವಹಿವಾಟು ನಡೆದಿದ್ದು, ವಹಿವಾಟು ಮೌಲ್ಯ ₹25.08 ಲಕ್ಷ ಕೋಟಿಗಳಷ್ಟಾಗಿತ್ತು. ಇದು ಮೇ ತಿಂಗಳಿನಲ್ಲಿ ₹25.14 ಲಕ್ಷ ಕೋಟಿ ಆಗಿತ್ತು. ಇದು ಇದುವರೆಗಿನ ಗರಿಷ್ಠ ಮಟ್ಟವಾಗಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ 1,490 ಕೋಟಿ ವಹಿವಾಟು ನಡೆದಿತ್ತು. ಅದು ಈ ಬಾರಿ 2 ಸಾವಿರ ಕೋಟಿ ದಾಟಿದ್ದು, ಶೇ 34ರಷ್ಟು ಏರಿಕೆ ದಾಖಲಿಸಿದೆ. ಮೌಲ್ಯದ ಲೆಕ್ಕದಲ್ಲಿ ಶೇ 21ರಷ್ಟು ಹೆಚ್ಚಳವಾಗಿದ್ದು, ₹24.85 ಲಕ್ಷ ಕೋಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.