ADVERTISEMENT

‘ನಗರ ಮೂಲಸೌಕರ್ಯ ಅಭಿವೃದ್ಧಿಗೆ ₹10 ಲಕ್ಷ ಕೋಟಿ ಹೂಡಿಕೆ’: ಶ್ರೀನಿವಾಸ್ ಕೆ.

ಪಿಟಿಐ
Published 30 ಆಗಸ್ಟ್ 2025, 14:05 IST
Last Updated 30 ಆಗಸ್ಟ್ 2025, 14:05 IST
   

ನವದೆಹಲಿ: ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ನಗರದ ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ₹30 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಮುಂದಿನ ನಾಲ್ಕು ವರ್ಷದಲ್ಲಿ ಮತ್ತೆ ₹10 ಲಕ್ಷ ಕೋಟಿ ಹೂಡಿಕೆ ಮಾಡುವ ಅಂದಾಜಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀನಿವಾಸ್ ಕೆ. ಹೇಳಿದ್ದಾರೆ.

ಭಾರತದ ನಗರಗಳು ಕ್ಷಿಪ್ರವಾಗಿ ಬೆಳೆಯುತ್ತಿದ್ದು, ಮುಂದಿನ 20 ವರ್ಷದಲ್ಲಿ ಜನಸಂಖ್ಯೆಯ ಶೇ 50ಕ್ಕಿಂತ ಹೆಚ್ಚು ಜನರು ನಗರ ಪ್ರದೇಶಗಳಲ್ಲಿ ವಾಸಿಸಲಿದ್ದಾರೆ. ಈ ಕ್ಷಿಪ್ರ ನಗರೀಕರಣವು ಸವಾಲು ಮತ್ತು ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

2004ರಿಂದ 2014ರ ವರೆಗೆ ವಲಯದಲ್ಲಿ ₹1.78 ಲಕ್ಷ ಕೋಟಿ ಮಾತ್ರ ಹೂಡಿಕೆಯಾಗಿತ್ತು. ಆದರೆ, ಕಳೆದ ದಶಕದಲ್ಲಿ ₹30 ಲಕ್ಷ ಕೋಟಿ ಹೂಡಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಗರ ಮೂಲಸೌಕರ್ಯ ಮತ್ತು ನಗರ ಪ್ರದೇಶವು ಹೆಚ್ಚಿನ ಹೂಡಿಕೆ ಸ್ವೀಕರಿಸಿದೆ ಎಂದಿದ್ದಾರೆ. 

ADVERTISEMENT

ರಿಯಲ್‌ ಎಸ್ಟೇಟ್‌ ವಲಯವು, ವಲಯದ ಅಭಿವೃದ್ಧಿಗೆ ಸಹಕರಿಸಬೇಕು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೇಂದ್ರ ಸರ್ಕಾರದಲ್ಲಿ ನಾಲ್ಕನೇ ಅತಿಹೆಚ್ಚು ವೆಚ್ಚ ಮಾಡುವ ಸಚಿವಾಲಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.