ADVERTISEMENT

ಭಾರತಕ್ಕೆ ಅಮೆರಿಕದ ವಾಣಿಜ್ಯ ಇಲಾಖೆ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 12:53 IST
Last Updated 13 ಸೆಪ್ಟೆಂಬರ್ 2022, 12:53 IST

ಬೆಂಗಳೂರು: ಅಮೆರಿಕ ಹಾಗೂ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಸಹಯೋಗಕ್ಕೆ ಅವಕಾಶ ಅರಸಲು ಅಮೆರಿಕದ ವಾಣಿಜ್ಯ ಇಲಾಖೆಯ ಶಿಕ್ಷಣ ವ್ಯಾಪಾರ ನಿಯೋಗವು ಬೆಂಗಳೂರು, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಿದೆ.

ಅಮೆರಿಕದ 15 ರಾಜ್ಯಗಳ ಒಟ್ಟು 21 ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ನಿಯೋಗದಲ್ಲಿ ಇದ್ದಾರೆ. ಭಾರತಕ್ಕೆ ತನ್ನ ಶೈಕ್ಷಣಿಕ ಗುರಿ ತಲುಪಲು ಅಗತ್ಯವಿರುವ ಅನುಭವ ಅಮೆರಿಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿದೆ ಎಂದು ಅಮೆರಿಕದ ಚೆನ್ನೈ ಕಾನ್ಸುಲೇಟ್ ಜನರಲ್‌ನ ಪ್ರಕಟಣೆ ಹೇಳಿದೆ.

‘ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪಾಲುದಾರಿಕೆಯನ್ನು ಈ ನಿಯೋಗವು ಹುಡುಕಲಿದೆ. ಅಮೆರಿಕ ಮತ್ತು ಭಾರತದ ನಡುವಿನ ಬಲಿಷ್ಠ ಶೈಕ್ಷಣಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಲಿಸಲಿದೆ’ ಎಂದು ರಾಯಭಾರಿಯ ಪ್ರತಿನಿಧಿ ಪಟ್ರೀಶಾ ಎ. ಲಸೀನಾ ಹೇಳಿದ್ದಾರೆ. ನಿಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಭೆಟಿ ಮಾಡಲಿದೆ.

ADVERTISEMENT

ನಿಯೋಗವು ಇದೇ 16ರವರೆಗೆ ಭಾರತದಲ್ಲಿ ಇರಲಿದೆ. ಹೆಚ್ಚಿನ ಮಾಹಿತಿಗೆ trade.gov/buyusa-india ವೆಬ್‌ಸೈಟ್ ಭೇಟಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.